ಬೆಂಗಳೂರು : ಆಯುರ್ವೇದ ಚಿಕಿತ್ಸೆ ನೀಡುವ ನೆಪದಲ್ಲಿ ಜನರಿಂದ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ನಕಲಿ ವೈದ್ಯರ ತಂಡವನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಕಲಿ ನಾಟಿ ವೈದ್ಯ ಮೊಹಮ್ಮದ್ ಸಮೀನ್ ಜೊತೆ ಸಹಾಯಕರಾದ ಸೈಫ್ ಅಲಿ ಹಾಗೂ ಮೊಹಮದ್ ರಹೀಸ್ ತಾವು ನಾಟಿ ವೈದ್ಯರೆಂದು ಹೇಳಿ ಚಿಕಿತ್ಸೆ ಕೊಡಿಸುವುದಾಗಿ ವಂಚಿಸಿ ಲಕ್ಷ ಲಕ್ಷ ಹಣ ಕೀಳುತ್ತಿದ್ದರು.
ಪಂಕಜ್ ಎಂಬ ಹೆಸರಿನ ವ್ಯಕ್ತಿಯೊಬ್ಬರಿಗೆ ಕಾಲಿನ ಕೀವು ತೆಗೆಯುವುದಾಗಿ ಹೇಳಿ 8 ಲಕ್ಷ ಹಣವನ್ನು ಪಡೆದಿದ್ದ ಗ್ಯಾಂಗ್ ನಂತರ ಚಿಕಿತ್ಸೆ ನೀಡದೇ ಯಾಮಾರಿಸಿತ್ತು. ಈ ಹಿನ್ನೆಲೆ ಪಂಕಜ್ ರಾಥೋಡ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ನೆಲಮಂಗಲ ಬಳಿ ರಸ್ತೆ ಬದಿಯಲ್ಲಿ ಆಯುರ್ವೆದ ಚಿಕಿತ್ಸೆ ಹೆಸರಿನಲ್ಲಿ ಶೆಡ್ ಹಾಕಿಕೊಂಡಿದ್ದ ಮೊಹಮ್ಮದ್ ಸಮೀನ್ ಜೊತೆ ಸಹಾಯಕರಾದ ಸೈಫ್ ಅಲಿ ಹಾಗೂ ಮೊಹಮದ್ ರಹೀಸ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಜನರು ಇಂತಹ ನಕಲಿ ವೈದ್ಯರಿಂದ ಎಚ್ಚರದಿಂದಿರುವುದು ಒಳಿತು.
BREAKING NEWS : ಬ್ರಿಟನ್ ದೊರೆ ‘ಚಾರ್ಲ್ಸ್- 3’ರ ಜೊತೆ ‘ಪ್ರಧಾನಿ ಮೋದಿ’ ದೂರವಾಣಿ ಸಂಭಾಷಣೆ ; ಮಹತ್ವದ ಮಾತುಕತೆ