ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿತ್ತು. ಈ ವೇಳೆ ಒಂದು ಲಕ್ಷಕ್ಕೂ ಹೆಚ್ಚು ರದ್ದಾದ ನೋಟುಗಳು ಪತ್ತೆಯಾಗಿದೆ.
ಭಕ್ತರು ತಮ್ಮ ಹರಕೆ ಈಡೇರಿಕೆಗೆ ಒಂದು ಲಕ್ಷ ಹೆಚ್ಚನ ಹಣವನ್ನ ಹುಂಡಿಗೆ ಹಾಕಿದ್ದಾರೆ.ಇದೀಗ ಆಷಾಢ ಮಾಸವಾಗಿದ್ದರಿಂದ ಚಾಮುಂಡೇಶ್ವರಿ ದೇವಿ ದರ್ಶನ ಪಡೆಲು ಸಾಕಷ್ಟು ಭಕ್ತರು ಆಗಮಿಸುತ್ತಿದ್ದರು. ಈ ವೇಳೆ ಬಂದ ಭಕ್ತರು ಹುಂಡಿಗೆ ಹಣ ಹಾಕಿ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಇನ್ನು ನೋಟ್ ಬ್ಯಾನ್ ಐದು ವರ್ಷಗಳೇ ಕಳೆದಿದ್ದು, ಇಂದಿಗೂ ಸಹ ಹಳೆ ನೋಟುಗಳನ್ನ ಕಂಡು ಬರುತ್ತಿರುವುದು ದೇವಾಸ್ಥಾನ ಸಿಬ್ಬಂದಿ ಆಶ್ಚರ್ಯವಾಗಿದೆ.