ವಿಜಯಪುರ : ಬಾರ್ ಮಾಲೀಕರ ಜೊತೆ ಡೀಲ್ ಕುದುರಿಸಿದ ಅಬಕಾರಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮುದ್ದೇಬಿಹಾಳ ತಾಲೂಕು ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಅಮಾನತುಗೊಳಿಸಲಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಬಕಾರಿ ಅಧಿಕಾರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅದನಾದರೂ ಆಗಲಿ ನನ್ನ ಪಾಲಿನ ಹಣ ಕೊಡಿ ಎಂದು ಜ್ಯೊತಿ ಮೇತ್ರಿ ಬೇಡಿಕೆಯಿಟ್ಟಿದ್ದರು. ಅಬಕಾರಿ ಇಲಾಖೆಯ ಕಚೇರಿಯಲ್ಲೇ ಡೀಲ್ ವ್ಯವಹಾರದ ಬಗ್ಗೆ ಮಾತುಕತೆ ನಡೆದಿದೆ. ಓರ್ವ ಬಾರ್ ಮಾಲೀಕ ಡೀಲ್ ಕುರಿತ ಮಾತುಕತೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಘಟನೆ ಬಳಿಕ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು, ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಅಮಾನತುಗೊಳಿಸುವಂತೆ ಒತ್ತಾಯ ಮಾಡಲಾಗಿತ್ತು. ಈ ಹಿನ್ನೆಲೆ ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಯಾರದ್ದು ಕೊಡತೀರೋ ಬಿಡತೋರೋ..ನನ್ನದಂತು ಬೇಕು..ನನ್ನದು ಬಿಟ್ಟು ಅವರದ್ದು ಹೇಗೆ ಮಾಡಿದಿರಿ..ಕೊಡುವುದಿದ್ದರೆ ನೀಟಾಗಿ ಕೊಡಿ..ಒಲ್ಲೆ ಅಂದರೆ ನಾಳೆನೇ ಟೈಮ್ ಹಚ್ಚಿ ತೆಗೆದುಕೊಳ್ಳುತ್ತೇನೆ ಎಂದು ಮಾತನಾಡಿದ್ದರು. ಈ ಸಂಭಾಷಣೆಯ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
JOB ALERT : ‘MBA’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಭಾರತೀಯ ವಿಜ್ಞಾನ ಸಂಸ್ಥೆ’ಯಲ್ಲಿ ಉದ್ಯೋಗವಕಾಶ
BIGG NEWS: ಚಿತ್ರದುರ್ಗದಲ್ಲಿ ನೀರಿನಲ್ಲಿ ವಿಷ ಬೆರೆಸಿ ಕುಡಿದು ಮೂವರು ಮಹಿಳೆಯರು ಆತ್ಮಹತ್ಯೆ
BIG BREAKING NEWS: ಅಮೃತಸರದಲ್ಲಿ ಹಾಡಹಗಲೇ ಶಿವಸೇನಾ ಮುಖಂಡ ಸುಧೀರ್ ಸೂರಿ ಮೇಲೆ ಗುಂಡಿನ ದಾಳಿ