ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಹಿಳೆಯರ ಆರ್ಥಿಕ ಸ್ಥಿತಿಯನ್ನ ಸುಧಾರಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಅದ್ರಲ್ಲಿ ಈ ಉಚಿತ ಹೊಲಿಗೆ ಯಂತ್ರ ಯೋಜನೆಯೂ ಒಂದು. ಈ ಯೋಜನೆಯಡಿ ದೇಶದ ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯರು ಮನೆಯಲ್ಲಿ ಕುಳಿತು ಆದಾಯ ಗಳಿಸುವಂತಾಗುವುದು ಈ ಯೋಜನೆಯ ಉದ್ದೇಶವಾಗಿದೆ.
ನೀವು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭ ಪಡೆಯಲು ಇಚ್ಛಿಸಿದ್ರೆ, ಈ ಯೋಜನೆಗೆ ಸಂಬಂಧಿಸಿದ ಕೆಲವು ಮುಖ್ಯ ಮಾಹಿತಿಗಳನ್ನ ನೆನಪಲ್ಲಿಡಿ.
* ಉಚಿತ ಹೊಲಿಗೆ ಯಂತ್ರ ಪಡೆಯಲು ಬಳಸುವ ಮಹಿಳೆಯರ ವಯಸ್ಸು 20 ರಿಂದ 40 ವರ್ಷಗಳ ನಡುವೆ ಇರಬೇಕು.
* ಈ ಯೋಜನೆಯ ಲಾಭ ಪಡೆಯುವ ಕೂಲಿ ಕಾರ್ಮಿಕರ ಪತಿಯ ವಾರ್ಷಿಕ ಆದಾಯ ರೂ.12 ಸಾವಿರ ಮೀರಬಾರದು.
* ವಿಧವೆ ಮತ್ತು ಅಂಗವಿಕಲ ಮಹಿಳೆಯರು ಸಹ ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭ ಪಡೆಯಬಹುದು.
* ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಗುರುತಿನ ಚೀಟಿ, ಅಂಗವೈಕಲ್ಯವಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ, ನಿರ್ಗತಿಕ ವಿಧವೆ ಮಹಿಳೆಯರಿಗೆ ವಿಧವಾ ಪ್ರಮಾಣ ಪತ್ರ, ಸಮುದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹೊಂದಿರಬೇಕು.
* ನೀವು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸಿದ್ರೆ, ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ https://www.india.gov.in/ ಗೆ ಭೇಟಿ ನೀಡಿ.