ಹುಬ್ಬಳ್ಳಿ : ರಾಮಮಂದಿರ ನಿರ್ಮಾಣಕ್ಕೆ ನಾವು ಕೊಟ್ಟ ಇಟ್ಟಿಗೆ ಎಲ್ಲಿ? ರಾಮಮಂದಿರ ಪಕ್ಕದ ಜಮೀನಿನ ವಿಚಾರವಾಗಿ ಭ್ರಷ್ಟಾಚಾರ ಆಗಿದೆ.ಜಮೀನಿನ ಬೆಲೆ ಹೆಚ್ಚಳ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಾಧಿಕಾರಿಗಳು ಕೋಟ್ಯಾಂತರರು ಲಾಭ ಮಾಡಿಕೊಂಡಿದ್ದಾರೆ 17 ಲಕ್ಷಕ್ಕೆ ಭೂಮಿ ಪಡೆದು ಮೂರು ಕೋಟಿಗೆ ಮಾರಾಟ ಮಾಡಿದ್ದಾರೆ.ಇದರ ಬಗ್ಗೆ ಯಾರೂ ಹೋರಾಟ ಮಾಡಬೇಕು ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.ರಾಮನು ನಮ್ಮದೇವರು ದುರ್ಗಮ್ಮ ಕೂಡ ನಮ್ಮ ದೇವರು ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಹತ್ತು ವರ್ಷದಲ್ಲಿ ಹಿಂದುಗಳಿಗೆ ಏನಾದರೂ ಲಾಭ ಆಗಿದೆಯಾ? ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ನಾನು ಹಿಂದೂ ನೀವು ಹಿಂದೂ ಏನಾದರೂ ಲಾಭ ಆಗಿದೆಯಾ ಏನಾದ್ರೂ ವಿಶೇಷ ಲಾಭ ಆಗಿದೆಯಾ? ಎಂದು ಪ್ರಶ್ನಿಸಿದರು.
ಇದರಿಂದ ಬಿಜೆಪಿ ಅವರಿಗೆ ಅಷ್ಟೇ ಲಾಭವಾಗಿದೆ. ಶ್ರೀಕಾಂತ್ ಪೂಜಾರಿ ವಿರುದ್ಧ ಕೇಸ್ ಹಾಕಿದರೆ ನಮಗೇನು ಲಾಭವಾಗುತ್ತದೆ?ಅಷ್ಟು ಕೇಸ್ ಆಗಿದೆ ಇನ್ನೊಂದು ಬಾರಿ ಕೋರ್ಟಿಗೆ ಹೋದರೆ ಏನು? ಇಂತಹ ವಿಚಾರವೇ ಬಿಜೆಪಿಗೆ ಬೇಕಿದೆ ಎಂದು ಅವರು ತಿಳಿಸಿದರು.