ದಾವಣಗೆರೆ: ನಗರದ ಹೊನ್ನಾಳಿ ಕಾಲೇಜು ಉಪನ್ಯಾಸಕರು ಪ್ರಾಂಶುಪಾಲರ ನಡುವೆ ಗಲಾಟೆ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಫುಲ್ ಗರಂ ಆಗಿದ್ದು, “ನಿಮ್ಮ ಜಗಳಗಳಿಂದ ಮಕ್ಕಳ ಭವಿಷ್ಯ ಹಾಳುಮಾಡಬೇಡಿ” ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ
ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ ಅವರ ಮತಕ್ಷೇತ್ರವಾಗಿರುವ ಹೊನ್ನಾಳಿಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಜಗಳ ತೀವ್ರಗೊಂಡು ಉಪನ್ಯಾಸಕರು ಪಾಠ ಮಾಡುವುದನ್ನೆ ನಿಲ್ಲಿಸಿದ್ದರು.
ಉಪನ್ಯಾಸಕರು ಪಾಠ ಮಾಡದ ಕಾರಣ ಕಾಲೇಜಿನ ವಿದ್ಯಾರ್ಥಿಗಳು ಹೊರಗಡೆ ಬಂದು ಪ್ರತಿಭಟನೆಯಲ್ಲಿ ನಡೆಸಲು ಮುಂದಾಗಿದ್ದರು ಈ ವಿಷಯ ತಿಳಿದ ಕೂಡಲೇ ಕಾಲೇಜಿಗೆ ಧಾವಿಸಿದ ರೇಣುಕಾಚಾರ್ಯಯ, ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ತರಾಟೆ’ ತೆಗೆದುಕೊಂಡಿದ್ದಾರೆ. ಬಳಿಕ ನಿಮ್ಮ ಜಗಳಗಳಿಗೆ ಮಕ್ಕಳ ಭವಿಷ್ಯ ಹಾಳುಮಾಡಬೇಡಿ ಎಂದು ಹೇಳುವ ಮೂಲಕ ಉಪನ್ಯಾಸಕರು ಪ್ರಾಂಶುಪಾಲರಿಗೆ ಎಂದಿನಂತೆ ಪಾಠಮಾಡೋದಕ್ಕೆ ಮುಂದಾಗಲು ಸೂಚನೆ ನೀಡಿದ್ದಾರೆ. ಹೀಗೆ ಜಗಳ ಮುಂದುವರಿಗೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆನೀಡಲಾಗಿದೆ.