ಬೆಂಗಳೂರು : ವಿಕ್ರಾಂತ ಭಾರತ ಪತ್ರಿಕೆ ಸಂಪಾದಕರು, ವೈಚಾರಿಕತೆ ಚಿಂತಕರಾಗಿದ್ದ ಬಾಗಲಕೋಟ ಜಿಲ್ಲೆ ಜಮಖಂಡಿಯ ಎಂ.ಸಿ.ಗೊಂದಿ(94) ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ಸಂತಾಪ ವ್ಯಕ್ತಪಡಿಸಿದೆ.
ಬಾಗಕೋಟ ಭಾಗದಲ್ಲಿ ಕಾನಿಪ ಕಟ್ಟಿ ಬೆಳೆಸುವಲ್ಲಿ ಗೋಂದಿ ಅವರ ಸೇವೆ ಅನನ್ಯವಾಗಿತ್ತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.
ಜಮಖಂಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಗಿತ್ತು ಎಂದು ನೆನಪಿಸಿಕೊಂಡಿರುವ ತಗಡೂರು,
ಗೋಂದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ








