Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಾರಿಕಾಂಬೆ ದರ್ಶನದ ಪಡೆದ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ: ದೇವಸ್ಥಾನ ಸಮಿತಿಯಿಂದ ಸನ್ಮಾನ
KARNATAKA

ಸಾಗರದ ಮಾರಿಕಾಂಬೆ ದರ್ಶನದ ಪಡೆದ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ: ದೇವಸ್ಥಾನ ಸಮಿತಿಯಿಂದ ಸನ್ಮಾನ

By kannadanewsnow0909/02/2026 7:13 PM

ಶಿವಮೊಗ್ಗ: ಸಾಗರದ ಐತಿಹಾಸಿಕ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ಜಾತ್ರೆ 9 ದಿನಗಳ ಕಾಲ ನಡೆಯುತ್ತಿದ್ದು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಕುಟುಂಬ ಸಮೇತ ತಾಯಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಆ ಬಳಿಕ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಈ ಜಾತ್ರೆಯಲ್ಲಿ ಊರಿಗೆ ಊರೇ ಪಾಲ್ಗೊಂಡಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಬಂದು ಹೋಗುತ್ತಿದ್ದು ಅತ್ಯಂತ ವ್ಯವಸ್ಥಿತವಾಗಿ ಜಾತ್ರೆಯನ್ನು ಕಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಇದೇ ಮೊದಲ ಬಾರಿಗೆ ನಾನು ಸಾಗರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ. ಈ ಜಾತ್ರೆ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು ತಾಯಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಭಾಗ್ಯ ನನಗೆ ಲಭ್ಯವಾಗಿದೆ ಎಂದ ಅವರು, ಜಾತ್ರೆಯನ್ನು ಮುನ್ನಡೆಸುವಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.

ರಾಜ್ಯ ಪತ್ರಕರ್ತರ ಸಮ್ಮೇಳನ ಈ ಬಾರಿ ಮಾರ್ಚ್ ಎರಡನೇ ವಾರದಲ್ಲಿ ಬೀದರ್ ನಲ್ಲಿ ನಡೆಯಲಿದೆ, ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. ಸಮ್ಮೇಳನಕ್ಕೆ ಹಲವು ಸಮಿತಿಗಳನ್ನು ರಚಿಸಲಾಗಿದೆ ಎಂದ ಅವರು, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ, ವಿಚಾರಗೋಷ್ಠಿಗಳು ನಡೆಯಲಿವೆ. ಪತ್ರಕರ್ತರಿಗೆ ಪಿಂಚಣಿ, ಆರೋಗ್ಯ ವಿಮೆ ಹಾಗೂ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸಡಿಲಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಕೋರಿದ್ದೇವೆ ಎಂದರು.

ರಾಜ್ಯದ ಪತ್ರಕರ್ತರಿಗೆ ಬಸ್ ಪಾಸಿಗೆ ಸಂಬಂಧಿಸಿದಂತೆ ಕೂಡ ತುರ್ತು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ. ಕರ್ನಾಟಕದ ಅತಿ ದೊಡ್ಡ ಸಂಘಟನೆ ಆಗಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ 10 ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಡಿ. ವಿ. ಗುಂಡಪ್ಪನವರು ಆರಂಭಿಸಿದ ಈ ಸಂಸ್ಥೆ ಶತಮಾನದ ಅಂಚಿನಲ್ಲಿದೆ ಎಂದ ಅವರು, ಸಮ್ಮೇಳನಕ್ಕೆ 4000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಈಗಾಗಲೇ ಮೂರು ಸಭೆಗಳನ್ನು ಬೀದರ್ ನಲ್ಲಿ ನಡೆಸಲಾಗಿದೆ. ತಾಲೂಕು ,ಜಿಲ್ಲೆ ಎಲ್ಲಾ ಕೇಂದ್ರಗಳಿಂದಲೂ ಪತ್ರಕರ್ತರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ. ಎನ್. ನಾಗೇಂದ್ರ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಅಧ್ಯಕ್ಷರಾದ ವೈದ್ಯನಾಥ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ, ಉಪಾಧ್ಯಕ್ಷ ರವಿ ನಾಯ್ಡು, ಹಿರಿಯ ಪತ್ರಕರ್ತರಾದ ನಾಗೇಶ್ ನಾಯಕ ಸೇರಿದಂತೆ ಇತರರು ಹಾಜರಿದ್ದರು.

ನಂತರ ಸಿಗಂದೊರಿಗೆ ತೆರಳಿದ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರನ್ನು, ದೇವಾಲಯ ಸಮಿತಿ ಕಾರ್ಯದರ್ಶಿ ರವಿಕುಮಾರ್ ರವರು ವಿಶೇಷ ಪೂಜೆಗೆ ಅವಕಾಶ ಮಾಡಿಕೊಟ್ಟು, ಅಲ್ಲದೇ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಶಿವಾನಂದ ತಗಡೂರು ಅವರು ಸಿಗಂದೂರು ಸೇತುವೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಾಗರದ ಮಾರಿಕಾಂಬೆಗೆ ಬೃಹತ್ ಗಾತ್ರದ ಹೂವಿನ ಹಾರ ಅರ್ಪಿಸಿದ ‘ರಾಯಲ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆ’

BIG NEWS: ಇನ್ಮುಂದೆ ‘ಸೋಷಿಯಲ್ ಮೀಡಿಯಾ ಪೋಸ್ಟ್’ಗಳ ವಿರುದ್ಧ ‘FIR ದಾಖಲು’ ವೇಳೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

Share. Facebook Twitter LinkedIn WhatsApp Email

Related Posts

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

21/03/2026 9:16 PM1 Min Read

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM2 Mins Read

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM2 Mins Read
Recent News

‘ಸ್ಲೀಪ್ ಡಿವೋರ್ಸ್’: ಉತ್ತಮ ಆರೋಗ್ಯಕ್ಕಾಗಿ ಪ್ರತ್ಯೇಕವಾಗಿ ಮಲಗಲು ಮುಂದಾಗುತ್ತಿರುವ ದಂಪತಿಗಳು!

21/03/2026 9:53 PM

ಬಹಾಮಾಸ್ ಬಳಿಯ ‘ಶಾರ್ಕ್’ಗಳಲ್ಲಿ ಕೊಕೇನ್ ಮತ್ತು ಕೆಫೀನ್ ಅಂಶ ಕಂಡುಬಂದಿದೆ ; ಅಧ್ಯಯನ

21/03/2026 9:53 PM

ಭಾವನಾತ್ಮಕವಾಗಿ ‘ಅಪಕ್ವ ಪೋಷಕ’ರನ್ನು ನಿಭಾಯಿಸುವುದು ಹೇಗೆ? ಮನಶ್ಶಾಸ್ತ್ರಜ್ಞರು ನೀಡಿದ 3 ಸೂತ್ರಗಳಿವು

21/03/2026 9:49 PM

ಡೇಟಿಂಗ್ ಲೋಕದ ಹೊಸ ವಿಲನ್ ‘ಘೋಸ್ಟ್‌ಲೈಟಿಂಗ್’: ಇದು ‘ಘೋಸ್ಟಿಂಗ್‌’ಗಿಂತಲೂ ಹೆಚ್ಚು ಅಪಾಯಕಾರಿ ಏಕೆ?

21/03/2026 9:46 PM
State News
KARNATAKA

ಇದು ‘ಕೆಎನ್ಎನ್ ಸುದ್ದಿ’ ಫಲಶೃತಿ: ಚಾಮರಾಜನಗರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಫ್ಲೆಕ್ಸ್’ ತೆರವು

By kannadanewsnow0921/03/2026 9:16 PM KARNATAKA 1 Min Read

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯವರ ಫ್ಲೆಕ್ಸ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಚಾಮರಾಜನಗರದಲ್ಲೂ ಅಂತಹದ್ದೇ ಘಟನೆ…

ಮಂಡ್ಯದಲ್ಲಿ ‘IPS ಅಧಿಕಾರಿ’ಯ ‘ಫ್ಲೆಕ್ಸ್’ ಹವಾ: ರಾಜಕಾರಣಿಗಳನ್ನೇ ಮೀರಿಸಿದ ‘ಎಸ್ಪಿ ಶೋಭರಾಣಿ’!

21/03/2026 7:49 PM

ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ

21/03/2026 7:40 PM

ಚಾಮರಾಜನಗರ: ಪ್ಲೆಕ್ಸ್ ಗಳಲ್ಲಿ ಪ್ರಚಾರಕ್ಕಿಳಿದ್ರಾ ಜಿಲ್ಲಾ ಮಟ್ಟದ ಅಧಿಕಾರಿಗಳು.!?

21/03/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.