Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಹಾರ್ಮುಜ್ ಜಲಸಂಧಿ ದಿಗ್ಬಂಧನದ ನಡುವೆಯೂ ಭಾರತಕ್ಕೆ ಬಂತು 60 ಲಕ್ಷ ಬ್ಯಾರೆಲ್ ಇರಾನ್ ತೈಲ!

18/04/2026 7:30 PM

BREAKING: ಬದ್ಧವೈರಿಗಳ ಕಾಳಗಕ್ಕೆ ಭಾರತದ ಹಡಗು ಬಲಿ? 20 ಲಕ್ಷ ಬ್ಯಾರೆಲ್ ತೈಲ ಹೊತ್ತಿದ್ದ ಭಾರತೀಯ ಟ್ಯಾಂಕರ್ ಮೇಲೆ ಇರಾನ್ ನೌಕಾಪಡೆ ದಾಳಿ!

18/04/2026 7:23 PM

​ಕೆರೆ ಒತ್ತುವರಿ ತೆರವಿಗೆ ಸೊರಬ ತಹಶೀಲ್ದಾರ್ ಖಡಕ್ ಸೂಚನೆ: ಜಲಮೂಲಗಳ ಸಂರಕ್ಷಣೆಗೆ ರೈತರ ಸಹಕಾರಕ್ಕೆ ಮನವಿ

18/04/2026 7:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಮಾಹಿತಿ ಆಯುಕ್ತರಿಗೆ ‘KUWJ ಗೌರವ’
KARNATAKA

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಮಾಹಿತಿ ಆಯುಕ್ತರಿಗೆ ‘KUWJ ಗೌರವ’

By kannadanewsnow0902/01/2026 8:23 PM

ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವು ಅತ್ಯಂತ ಶ್ರೇಷ್ಠ ಅಂಗವಾಗಿದ್ದು, ಆ ಕಾರಣಕ್ಕಾಗಿ ಎಲ್ಲಾ ಕ್ಷೇತ್ರಗಳಿಗೂ ಪತ್ರಕರ್ತರು ಸಮಾಜಕ್ಕೆ ಮಾದರಿಯಾಗಬೇಕೆಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಮತ್ತು ಮಾಹಿತಿ ಹಕ್ಕು ಆಯುಕ್ತರಾಗಿ ನೇಮಕಗೊಂಡಿರುವ ಪತ್ರಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಪ್ರಮುಖವಾಗಿದ್ದು, ತಮ್ಮ ವೃತ್ತಿಯಲ್ಲಿ ಬದ್ಧತೆಯನ್ನು ಉಳಿಸುವ ಪತ್ರಕರ್ತರನ್ನು ಉತ್ತಮ ಸ್ಥಾನಮಾನಗಳು ಮತ್ತು ಗೌರವ ಹುಡುಕಿಕೊಂಡು ಬರುತ್ತದೆ. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪುರಸ್ಕೃತ ಪತ್ರಕರ್ತರು ಮತ್ತು ಮಾಹಿತಿ ಆಯುಕ್ತರಾಗಿ ಆಯ್ಕೆಗೊಂಡಿರುವ ಪತ್ರಕರ್ತರು ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದರು.

ಈ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಹಲವು ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಸಂಘವು ತಗಡೂರು ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪತ್ರಕರ್ತರ ವೃತ್ತಿ ಕ್ಷೇತ್ರಕ್ಕೆ ಮನ್ನಣೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್

ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ವೃತ್ತಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮೆರೆದ ಪತ್ರಕರ್ತರನ್ನು ಉತ್ತಮ ಸ್ಥಾನಮಾನಗಳು ಹುಡುಕಿ ಬರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇಂತಹ ಪತ್ರಕರ್ತರನ್ನು ಗುರುತಿಸಿ ಕೆಯೂಡಬ್ಲ್ಯೂಜೆ ಏರ್ಪಡಿಸುವ ಅಭಿನಂದನಾ ಸಮಾರಂಭಗಳು ನಿಜಕ್ಕೂ ಶ್ಲಾಘನೀಯ ಎಂದರು.

ಸಂಘದ ರಾಜ್ಯಾಧ್ಯಕ್ಷರಾಗಿರುವ ಶಿವಾನಂದ ತಗಡೂರು ಅವರು, ಪತ್ರಕರ್ತರ ಪರವಾಗಿ ಸದಾ ಒಂದಿಲ್ಲೊಂದು ಬೇಡಿಕೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳ ಬಳಿ ಬರುತ್ತಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ನಿಟ್ಟಿನಲ್ಲಿ ಸ್ಪಂಧನೆ ಕೊಡುತ್ತಿದ್ದಾರೆ. ಬಸ್ ಪಾಸ್, ಪತರಕರ್ತರ ಆರೋಗ್ಯ ಯೋಜನೆ ಸೆರಿದಂತೆ ಪತ್ರಕರ್ತರ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಕಠಿಣ ಷರತ್ತುಗಳನ್ನು ಸರಳೀಕರಣ ಮಾಡಲು ಪ್ರಯತ್ನ ನಡೆದಿದೆ ಎಂದರು.

ಸಂಕ್ರಾಂತಿ ಬಳಿಕ ಜಾಹಿರಾತು ನೀತಿಯನ್ನು ಜಾರಿ ಮಾಡಲು ಸಿದ್ಧತೆ ನಡೆದಿದೆ. ಇನ್ನು ಮುಂದೆಯೂ ಪತ್ರಕರ್ತರು ಹಲವಾರು ಸವಲತ್ತುಗಳನ್ನು ಪಡೆಯಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಆತ್ಮೀಯ ಸಂಬಂಧವನ್ನಿರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಸಿಎಂ ಮಾಧ್ಯಮ ಸಲಹೆಗಾರರಿಂದಲೂ ಸಂಘಕ್ಕೆ ಸದಾ ಪ್ರೋತ್ಸಾಹ ಸಿಗುತ್ತಿರುವುದು ನಮ್ಮ ಭಾಗ್ಯ ಎಂದರು. ಐಎ್ಡಬ್ಲೂೃಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ವಸತಿ ಸಚಿವರ ಮಾಧ್ಯಮ ಸಲಹೆಗಾರ ಕೆ.ಲಕ್ಷ್ಮಿ ನಾರಾಯಣ, ರಾಜ್ಯ ಸಂಘದ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಅವರು ಮಾತನಾಡಿದರು.

ಕೆಯುಡಬ್ಲೂೃಜೆ ಗೌರವ ಸಮರ್ಪಣೆ:

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ಧರಾಜು, ಬಿ.ಎಂ.ಹನ್ೀ, ಪೋಟೋ ಜರ್ನಲಿಸ್ಟ್ ಶಾಂತರಾಜು ಮತ್ತು ಮಾಹಿತಿ ಆಯೋಗದ ಆಯುಕ್ತರಾದ ವೆಂಕಟಸಿಂಗ್ ಹಾಗೂ ಮಹೇಶ್ ವಾಳ್ವೇಕರ್ ಅವರನ್ನು ಕೆಯುಡಬ್ಲೂೃಜೆ ವತಿಯಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪದಾಧಿಕಾರಿಗಳು, ಸದಸ್ಯರೂ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆಯುಡಬ್ಲೂಜೆ ಲಾಂಛನ ಕಪ್:

ಸಮಾರಂಭದಲ್ಲಿ ಕೆಯುಡಬ್ಲೂಜೆ ಲಾಂಚನ ಹೊಂದಿದ ಕಾಫಿ ಕಪ್‌ನ್ನು ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅನಾವಣ ಮಾಡಿದರು. ಇದೇ ಸಂದರ್ಭದಲ್ಲಿ ಕೆಯುಡಬ್ಲೂೃಜೆ ಹೊರ ತಂದಿರುವ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು

Share. Facebook Twitter LinkedIn WhatsApp Email

Related Posts

​ಕೆರೆ ಒತ್ತುವರಿ ತೆರವಿಗೆ ಸೊರಬ ತಹಶೀಲ್ದಾರ್ ಖಡಕ್ ಸೂಚನೆ: ಜಲಮೂಲಗಳ ಸಂರಕ್ಷಣೆಗೆ ರೈತರ ಸಹಕಾರಕ್ಕೆ ಮನವಿ

18/04/2026 7:21 PM2 Mins Read

JOB ALERT: ಮಾಜಿ ಸೈನಿಕರಿಗೆ ಸುವರ್ಣಾವಕಾಶ: ಕಾರಾಗೃಹ ಇಲಾಖೆಯಲ್ಲಿ ವೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

18/04/2026 6:13 PM1 Min Read

ಶಿವಮೊಗ್ಗ: ಏ.21ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

18/04/2026 6:08 PM1 Min Read
Recent News

​ಹಾರ್ಮುಜ್ ಜಲಸಂಧಿ ದಿಗ್ಬಂಧನದ ನಡುವೆಯೂ ಭಾರತಕ್ಕೆ ಬಂತು 60 ಲಕ್ಷ ಬ್ಯಾರೆಲ್ ಇರಾನ್ ತೈಲ!

18/04/2026 7:30 PM

BREAKING: ಬದ್ಧವೈರಿಗಳ ಕಾಳಗಕ್ಕೆ ಭಾರತದ ಹಡಗು ಬಲಿ? 20 ಲಕ್ಷ ಬ್ಯಾರೆಲ್ ತೈಲ ಹೊತ್ತಿದ್ದ ಭಾರತೀಯ ಟ್ಯಾಂಕರ್ ಮೇಲೆ ಇರಾನ್ ನೌಕಾಪಡೆ ದಾಳಿ!

18/04/2026 7:23 PM

​ಕೆರೆ ಒತ್ತುವರಿ ತೆರವಿಗೆ ಸೊರಬ ತಹಶೀಲ್ದಾರ್ ಖಡಕ್ ಸೂಚನೆ: ಜಲಮೂಲಗಳ ಸಂರಕ್ಷಣೆಗೆ ರೈತರ ಸಹಕಾರಕ್ಕೆ ಮನವಿ

18/04/2026 7:21 PM

​’ಅವರು ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’: ಸೀಮಾ ನಿರ್ಣಯ ವಿಧೇಯಕ ವಿರೋಧಿಸಿದ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿ

18/04/2026 7:19 PM
State News
KARNATAKA

​ಕೆರೆ ಒತ್ತುವರಿ ತೆರವಿಗೆ ಸೊರಬ ತಹಶೀಲ್ದಾರ್ ಖಡಕ್ ಸೂಚನೆ: ಜಲಮೂಲಗಳ ಸಂರಕ್ಷಣೆಗೆ ರೈತರ ಸಹಕಾರಕ್ಕೆ ಮನವಿ

By kannadanewsnow0918/04/2026 7:21 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ಪುರಂದರ ಅವರು…

JOB ALERT: ಮಾಜಿ ಸೈನಿಕರಿಗೆ ಸುವರ್ಣಾವಕಾಶ: ಕಾರಾಗೃಹ ಇಲಾಖೆಯಲ್ಲಿ ವೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

18/04/2026 6:13 PM

ಶಿವಮೊಗ್ಗ: ಏ.21ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

18/04/2026 6:08 PM

BREAKING: ಮಂಡ್ಯದಲ್ಲಿ ನಿರ್ಮಾಣ ಹಂತದ ಕಟ್ಟದಿಂದ ಬಿದ್ದು ಕಾರ್ಮಿಕ ಸ್ಥಳದಲ್ಲೇ ಸಾವು

18/04/2026 6:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.