Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರೇ, ಅಪ್ಪಿತಪ್ಪಿಯೂ ಈ ಆಹಾರಗಳನ್ನ ‘ಕುಕ್ಕರ್’ನಲ್ಲಿ ಬೇಯಿಸ್ಬೇಡಿ, ಕುತ್ತು ತಪ್ಪಿದ್ದಲ್ಲ!

31/03/2026 8:16 PM

KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಸಾಗರದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿಯ ಗರಿ

31/03/2026 8:12 PM

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

31/03/2026 8:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಸಾಗರದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿಯ ಗರಿ
KARNATAKA

KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಸಾಗರದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿಯ ಗರಿ

By kannadanewsnow0931/03/2026 8:12 PM

ಶಿವಮೊಗ್ಗ: ಜಿಲ್ಲೆಯ ಪತ್ರಕರ್ತರಾದ ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಅವರುಗಳಿಗೆ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ ) 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದ್ದು, ಜಿಲ್ಲೆಯ ಪತ್ರಿಕೋದ್ಯಮಕ್ಕೆ ಇನ್ನಷ್ಟು ಮರೆಗು ತಂದಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ವಿಭಾಗಗಳಲ್ಲಿ ಆಹ್ವಾನಿತ ವರದಿಗಳಲ್ಲಿ ಆಯ್ಕೆಗೊಂಡ ಅತ್ಯುತಮ ವರದಿಗಳಿಗಾಗಿ ಕೊಡಮಾಡುವ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗಾಗಿ ನೀಡುವ “ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ” ಗೆ ಶಿವಮೊಗ್ಗದ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರರಾದ *ಶರತ್ ಕುಮಾರ್ ಎಸ್ ಅವರು ಆಯ್ಕೆಯಾಗಿದ್ದಾರೆ.

ಶರತ್‌ಕುಮಾರ್ ಎಸ್ ಉದಯವಾಣಿ ಪತ್ರಿಕೆಯಲ್ಲಿ ‘ಅರಣ್ಯ ಇಲಾಖೆಯಿಂದ ವಕ್ಫ್ ಬೋರ್ಡು ಮಾದರಿ ಕಾರ್ಯಾಚರಣೆ’ ಶೀರ್ಷಿಕೆಯಡಿ ತುಂಗಾ ಜಲಾಶಯ ಮುಳುಗಡೆ ಸಂತ್ರಸ್ತರ ಕುರಿತು ಬರೆದ ಸರಣಿ ವರದಿಗೆ ಈ ಪ್ರಶಸ್ತಿ ಸಂದಿದೆ.

ಭದ್ರಾವತಿಯ ಸಿದ್ದಲಿಂಗಪ್ಪ ಮತ್ತು ಶ್ರೀಮತಿ ಗಿರಿಜಮ್ಮ ಅವರ ಪುತ್ರರಾದ ಶರತ್ ಕುಮಾರ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಜನಶ್ರೀ ನ್ಯೂಸ್ ಚಾನಲ್, ಪ್ರಜಾವಾಣಿ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಸಿದ್ದಾರೆ . ಪ್ರಸ್ತುತ ಉದಯವಾಣಿ ಪತ್ರಿಕೆಯ ಶಿವಮೊಗ್ಗ ಮುಖ್ಯವರದಿಗಾರರಾಗಿದ್ದಾರೆ.

ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿ ನೈಫುಣ್ಯತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಂಡಿರುವ ಸಂವೇದನಾಶೀಲ ಗುಣದ ಶರತ್‌ಕುಮಾರ್ ಅವರ ಮಾನವೀಯ ವರದಿಗಳು ಓದುಗರ , ಸರ್ಕಾರದ ಗಮನಸೆಳೆದಿವೆ.

ಸಾಗರದ KUWJ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲೆಯ ಸಾಗರದ ಸಂಯುಕ್ತ ಕರ್ನಾಟಕ ಪತ್ರಿಕೆಯ ವರಿದಿಗಾರ ಮಹೇಶ್ ಹೆಗಡೆ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( ಕೆಯುಡಬ್ಲ್ಯೂಜೆ ) ನೀಡುವ ಸಮಗ್ರ ವಿಭಾಗದಲ್ಲಿ “ಅಭಿಮಾನಿ ಪ್ರಕಾಶನ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಕಬಳಿಕೆ ಕುರಿತು ಸಂಯುಕ್ತ ಕರ್ನಾಟಕದಲ್ಲಿ ಸರಣೀ ವರದಿ ಮಾಡಿದ್ದು, ಅದರ ಪರಿಣಾಮ ಲೋಕಾಯುಕ್ತ ತನಿಖೆ ಕೂಡ ನಡೆದು ಸರ್ಕಾರದ ಗಮನ ಸೆಳೆದಿತ್ತು.

ಈ ವರದಿಯನ್ನು ಅತ್ಯುತ್ತಮ ವರದಿಯನ್ನಾಗಿ ಪರಿಗಣಿಸಿ 2024 ನೇ ಸಾಲಿನ “ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ” ಅಯ್ಕೆ ಮಾಡಲಾಗಿದೆ.

ಸಾಗರದ ಗಣೇಶ್ ಹೆಗಡೆ ಮತ್ತು ಶ್ರೀಮತಿಪಾರ್ವತಿ ಅವರ ಪುತ್ರರಾಗಿರುವ ಮಹೇಶ್ ಹೆಗಡೆ ಕಳೆದ 27 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಪ್ರಸ್ತುತ ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಾಗರ ವರದಿಗಾರರಾಗಿದ್ದಾರೆ.

ತನಿಖಾ ವರದಿಗಳನ್ನು ಬರೆಯುವಲ್ಲಿ ಸಿದ್ದಹಸ್ತರಾಗಿರುವ ಮಹೇಶ್ ಹೆಗಡೆ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬರೆದ ತನಿಖಾವರದಿಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಮಗ್ರ ವಿಭಾಗದಲ್ಲಿ ಅತ್ಯುತ್ತಮ ವರದಿಗೆ ನೀಡುವ 2024 ನೇ ಸಾಲಿನ ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿ ಅವರ ವೃತ್ತಿ ಬದ್ದತೆ ಮತ್ತು ಕೌಶಲ್ಯಕ್ಕೆ ಸಂದ ಗೌರವವಾಗಿದೆ.

ಏ.11, 12ರಂದು ಬೀದರಿನಲ್ಲಿ ಪ್ರಶಸ್ತಿ ಪ್ರದಾನ

ಏಪ್ರಿಲ್ 11 ಮತ್ತು 12 ರಂದು ಬೀದರ್ ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪ್ರಶಸ್ತಿಗೆ ಭಾಜನರಾದ ಶರತ್‌ಕುಮಾರ್ ಎಸ್. ಮತ್ತು ಮಹೇಶ್‌ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನಕಾರ್ಯದರ್ಶಿ ಜಿ.ಸಿ ಲೋಕೇಶ್ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

31/03/2026 8:03 PM3 Mins Read

BREAKING : ಗೃಹಸಚಿವ ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ : ಸುಮೋಟೋ ಕೇಸ್ ದಾಖಲು!

31/03/2026 7:22 PM1 Min Read

BIG NEWS : ನಾಳೆ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ : ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ

31/03/2026 7:19 PM1 Min Read
Recent News

ಮಹಿಳೆಯರೇ, ಅಪ್ಪಿತಪ್ಪಿಯೂ ಈ ಆಹಾರಗಳನ್ನ ‘ಕುಕ್ಕರ್’ನಲ್ಲಿ ಬೇಯಿಸ್ಬೇಡಿ, ಕುತ್ತು ತಪ್ಪಿದ್ದಲ್ಲ!

31/03/2026 8:16 PM

KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಸಾಗರದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿಯ ಗರಿ

31/03/2026 8:12 PM

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

31/03/2026 8:03 PM

BREAKING : ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಹೊಗೆ, ಲಕ್ನೋದಲ್ಲಿ ತುರ್ತು ಭೂಸ್ಪರ್ಶ

31/03/2026 7:43 PM
State News
KARNATAKA

KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಸಾಗರದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆಗೆ ಪ್ರಶಸ್ತಿಯ ಗರಿ

By kannadanewsnow0931/03/2026 8:12 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಪತ್ರಕರ್ತರಾದ ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಅವರುಗಳಿಗೆ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

31/03/2026 8:03 PM

BREAKING : ಗೃಹಸಚಿವ ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ : ಸುಮೋಟೋ ಕೇಸ್ ದಾಖಲು!

31/03/2026 7:22 PM

BIG NEWS : ನಾಳೆ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ : ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ

31/03/2026 7:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.