ವಿವಿಧ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ:
ಸಂಗೀತ ಮತ್ತು ಗಾಯನ ವಿಭಾಗ
-
ಲಘು ಸಂಗೀತ: ಸಾಗರದ ಶ್ರೀಮತಿ ಇಂದಿರಾಗಾಂಧಿ ಕಾಲೇಜಿನ ಸಪ್ತಕ ಹೆಚ್ ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
-
ಶಾಸ್ತ್ರೀಯ ಸಂಗೀತ: ಸಾಗರದ ಶ್ರೀಮತಿ ಇಂದಿರಾಗಾಂಧಿ ಕಾಲೇಜಿನ ರಮ್ಯ ಕೆ ಪ್ರಥಮ ಹಾಗೂ ಶಿವಮೊಗ್ಗ ಡಿ.ವಿ.ಎಸ್ ಕಾಲೇಜಿನ ಸಂಮೃದ್ಧಿ ನಾಯಕ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.
-
ಸಮೂಹ ಗಾಯನ (ಭಾರತೀಯ): ಸಾಗರದ ಶ್ರೀಮತಿ ಇಂದಿರಾಗಾಂಧಿ ಕಾಲೇಜಿನ ವೈಷ್ಣವಿ ಎಸ್ ಮತ್ತು ತಂಡ ಪ್ರಥಮ ಸ್ಥಾನ ಪಡೆದಿದೆ.
-
ಸಮೂಹ ಗಾಯನ (ಪಾಶ್ಚಾತ್ಯ): ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೈಷ್ಣವಿ ಕೆ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದೆ.

ನೃತ್ಯ ಮತ್ತು ನಾಟಕ ವಿಭಾಗ
-
ಜಾನಪದ ನೃತ್ಯ: ಶಿವಮೊಗ್ಗದ ಎಜೂರೇಟ್ ಕಾಲೇಜ್ ಆಪ್ ಮೆನೆಜ್ಮೆಂಟ್ ಸ್ಟಡೀಸ್ ತಂಡ ಪ್ರಥಮ ಸ್ಥಾನ ಪಡೆದಿದೆ.
-
ಶಾಸ್ತ್ರೀಯ ನೃತ್ಯ: ಶಿವಮೊಗ್ಗದ ಎಟಿಎನ್‌ಸಿಸಿ ಸಂಜೆ ಕಾಲೇಜಿನ ಕಾಮಾಕ್ಷಿ ಆರ್. ಪ್ರಭು ಪ್ರಥಮ ಸ್ಥಾನ ಗಳಿಸಿದ್ದಾರೆ.
-
ಏಕಾಂಕ ನಾಟಕ: ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ವಿಶ್ರಾಂತಿ ಪೈ ಮತ್ತು ತಂಡ ಪ್ರಥಮ ಸ್ಥಾನ ಪಡೆದಿದೆ.
-
ಪ್ರಹಸನ (Skit): ಶಿವಮೊಗ್ಗದ ಎಜೂರೇಟ್ ಕಾಲೇಜಿನ ತೃಪ್ತಿ ಬಿ ಡಿ ಮತ್ತು ತಂಡಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಲಲಿತಕಲೆ ಮತ್ತು ಇತರ ಸ್ಪರ್ಧೆಗಳು
-
ರಂಗೋಲಿ: ರಿಪ್ಪನಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನ್ಯಶ್ರಿ ಪ್ರಥಮ ಸ್ಥಾನ ಗಳಿಸಿದ್ದಾರೆ.
-
ಸ್ಥಳದಲ್ಲೇ ಚಿತ್ರಕಲೆ: ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಣಿತ ಬಿ ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ.
-
ಕ್ಲೇ ಮಾಡಲಿಂಗ್: ಶಿವಮೊಗ್ಗದ ಎಟಿಎನ್‌ಸಿಸಿ ಕಾಲೇಜಿನ ಪ್ರಥಮ್ ಎನ್. ಪ್ರಥಮ ಸ್ಥಾನ ಗಳಿಸಿದ್ದಾರೆ.
-
ಪೋಸ್ಟರ್ ಮೇಕಿಂಗ್: ಶಿವಮೊಗ್ಗದ ಕಟೀಲ್ ಅಶೋಕ್ ಪೈ ಕಾಲೇಜಿನ ಅಕ್ಷತಾ ಆರ್ ಕಾಮತ್ ಪ್ರಥಮ ಸ್ಥಾನ ಪಡೆದಿದ್ದಾರೆ.
-
ಸ್ಪಾಟ್ ಫೋಟೋಗ್ರಫಿ: ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಮ್ಮದ್ ಮುಬಶಿರ್ ಪ್ರಥಮ ಸ್ಥಾನ ಗಳಿಸಿದ್ದಾರೆ.
-
ಸಾಂಸ್ಕೃತಿಕ ಮೆರವಣಿಗೆ: ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆದಿದೆ.
ಭಾಷಣ ಮತ್ತು ಚರ್ಚಾ ಸ್ಪರ್ಧೆ
-
ಭಾಷಣ: ಶಿವಮೊಗ್ಗದ ಕಮಲ ನೆಹರು ಕಾಲೇಜಿನ ಲಿಖಿತ ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
-
ಚರ್ಚಾ ಸ್ಪರ್ಧೆ: ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರತೀಕ್ ಮತ್ತು ದೃವ ತಂಡ ಪ್ರಥಮ ಸ್ಥಾನ ಗಳಿಸಿದೆ.
-
ಕ್ವಿಜ್: ಭದ್ರಾವತಿಯ ವಿಶ್ವೇಶ್ವರಾಯ ಬಿ.ಇಡಿ. ಕಾಲೇಜಿನ ಶಿವರಾಜ್ ಸಿ ಮತ್ತು ತಂಡ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.
ಕುವೆಂಪು ವಿಶ್ವವಿದ್ಯಾಲಯದ ಈ ಸಾಂಸ್ಕೃತಿಕ ಸಂಭ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿಜೇತ ಕಾಲೇಜುಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….
ಮೊಸರು ಬೇಗನೆ ಹಾಳಾಗುತ್ತದೆಯೇ? ಹೀಗೆ ಸಂಗ್ರಹಿಸಿದರೆ, ಒಂದು ವಾರ ತಾಜಾವಾಗಿರುತ್ತದೆ!








