ರಾಯಚೂರು : ಕುರ್ ಕುರೇ.. ಅಂದಾಗೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಚಟ್ಪಟ್ ಅಂತಾ ಬಾಯಿ ಚಪ್ಪರಿಸಿಕೊಂಡು ತಿನ್ನೋರೆ ಹೆಚ್ಚು ಇದೀಗ ಈ ತಿನಿಸುಗಳನ್ನು ಕೊಳ್ಳೋದಕ್ಕೆ ಮುಗಿಬಿದ್ದಿದ್ದಾರೆ ಅದಕ್ಕೂ ಕಾರಣವೇನು ಗೊತ್ತಾ? ಈ ಸ್ಟೋರಿ ಓದಿ
ರಾಜ್ಯದಲ್ಲಿ ಕುರೇ ಪ್ಯಾಕೇಟ್ ಕಮಾಲ್ ಮಾಡಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಮಕ್ಕಳ ಕುರ್ ಕುರೆ ಪ್ಯಾಕೆಟ್ನಲ್ಲಿ 500 ರೂಪಾಯಿ ನೋಟ್ಗಳು ಪತ್ತೆಯಾಗಿದೆ. ವಿವಿಧ ಕಂಪನಿಗಳ 5 ರೂ. 2ರೂ.ನ ಕುರ್ ಕುರೆ ಪ್ಯಾಕೆಟ್ನಲ್ಲಿ 500 ಮುಖಬೆಲೆಯ ನೋಟ್ಗಳು ಪತ್ತೆಯಾಗುತ್ತಿದ್ದು ಜನ ಕುರ್ ಕುರೆ ಖರೀದಿಸಿ ಒಂದೊಂದು ಪ್ಯಾಕೆಟ್ನಲ್ಲಿ 5-6 ನೋಟ್ಗಳು ಪಡೆದಿದ್ದಾರೆ.
ಕೆಲವೊಂದರಲ್ಲಿ ಎರಡು ಮೂರು ನೋಟುಗಳು ಸಿಕ್ಕಿವೆ. ಹೀಗೆ ವಿವಿಧ ಪ್ಯಾಕೆಟ್ಗಳಲ್ಲಿ ಸುಮಾರು 20 ಸಾವಿರದಷ್ಟು ಹಣ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಮಾತ್ರವಲ್ಲಿ ಪೋಷಕರು ಕೂಡ ಕುರ್ ಕುರೇ ಪ್ಯಾಕೇಟ್ ಖರೀದಿಸೋದಕ್ಕೆ ಮುಂದಾಗಿದ್ದಾರೆ. ಇದೀಗ ಸ್ಟಾಕ್ ಖಾಲಿಯಾಗಿದೆ ಅನ್ನೋ ಮಟ್ಟಿಗೆ ಜನರು ಮುಗಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ