ಬೆಂಗಳೂರು: ಅನ್ಯರ ಖಾಸಗಿ ಬದುಕಿನ ಕುರಿತು ಲಘುವಾಗಿ ಮಾತನಾಡುವ ಕೀಳುಮಟ್ಟದ ರಾಜಕಾರಣವನ್ನು ಕುಮಾರಸ್ವಾಮಿ ಅವರು ಯಾವತ್ತೂ ಮಾಡಿಲ್ಲ. ಆದರೆ ಈ ಸ್ಯಾಂಟ್ರೊ ರವಿ ಯಾರು? ಆತನಿಗೂ ಸರ್ಕಾರಕ್ಕೂ ಏನು ಸಂಬಂಧ? ಅಂತಹ ಡೀಲ್ ಗಿರಾಕಿಗಳಿಗೆ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಏನು ಕೆಲಸ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಕೇಳುವುದು ಸಾರ್ವಜನಿಕರ ಹಕ್ಕು ಎಂದು ಜೆಡಿಎಸ್ ಟ್ವಿಟ್ ನಲ್ಲಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಗುಡುಗಿದೆ.
ಅನ್ಯರ ಖಾಸಗಿ ಬದುಕಿನ ಕುರಿತು ಲಘುವಾಗಿ ಮಾತನಾಡುವ ಕೀಳುಮಟ್ಟದ ರಾಜಕಾರಣವನ್ನು ಕುಮಾರಸ್ವಾಮಿ ಅವರು ಯಾವತ್ತೂ ಮಾಡಿಲ್ಲ. ಆದರೆ ಈ ಸ್ಯಾಂಟ್ರೊ ರವಿ ಯಾರು? ಆತನಿಗೂ ಸರ್ಕಾರಕ್ಕೂ ಏನು ಸಂಬಂಧ? ಅಂತಹ ಡೀಲ್ ಗಿರಾಕಿಗಳಿಗೆ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಏನು ಕೆಲಸ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಕೇಳುವುದು ಸಾರ್ವಜನಿಕರ ಹಕ್ಕು
2/5— Janata Dal Secular (@JanataDal_S) January 5, 2023
ಈ ಕುರಿತಂತೆ ಇಂದು ಸರಣಿ ಟ್ವಿಟ್ ಮಾಡಿದ್ದು, ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಬದಲು, ಸಂಬಂಧವಿಲ್ಲದಂತೆ ಅನಗತ್ಯ ಮಾತುಗಳನ್ನಾಡುವ ಬಿಸಿ ಪಾಟೀಲ್ ಅವರಿಗೆ ಸವಾಲು. ಯಾವ ಪುರುಷಾರ್ಥಕ್ಕಾಗಿ ಕೋರ್ಟ್ ನಿಂದ ಸ್ಟೇ ಪಡೆದುಕೊಂಡ್ರಿ? ಆ ದಲಿತ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು ನೀಡಿದ ದೂರಿನ ಬಗ್ಗೆ, ಸರ್ಕಾರ ಕೆಡವಿ ಅದೇನೋ ಮಹಾತ್ಕಾರ್ಯ ಮಾಡಿದಂತೆ ಬೀಗಿದ ಬಾಂಬೆ ಶೂರರಲ್ಲಿ ಉತ್ತರವಿದೆಯಾ ಎಂದು ಪ್ರಶ್ನಿಸಿದೆ.
ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಬದಲು, ಸಂಬಂಧವಿಲ್ಲದಂತೆ ಅನಗತ್ಯ ಮಾತುಗಳನ್ನಾಡುವ @bcpatilkourava ಅವರಿಗೆ ಸವಾಲು. ಯಾವ ಪುರುಷಾರ್ಥಕ್ಕಾಗಿ ಕೋರ್ಟ್ ನಿಂದ ಸ್ಟೇ ಪಡೆದುಕೊಂಡ್ರಿ? ಆ ದಲಿತ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು ನೀಡಿದ ದೂರಿನ ಬಗ್ಗೆ, ಸರ್ಕಾರ ಕೆಡವಿ ಅದೇನೋ ಮಹಾತ್ಕಾರ್ಯ ಮಾಡಿದಂತೆ ಬೀಗಿದ ಬಾಂಬೆ ಶೂರರಲ್ಲಿ ಉತ್ತರವಿದೆಯಾ
1/5— Janata Dal Secular (@JanataDal_S) January 5, 2023
ಸ್ಯಾಂಟ್ರೊ ರವಿಯಂಥವರಿಗೆ ದಿನನಿತ್ಯದ ಸರ್ಕಾರಿ ಆಡಳಿತದಲ್ಲಿ ಮೂಗು ತೂರಿಸುವ ಅವಕಾಶ ನೀಡಿರುವ ಬಿಜೆಪಿ ಸರ್ಕಾರಕ್ಕೆ ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಮೂರು ಬಿಟ್ಟವರಿಂದ ಪಾಠ ಕಲಿಯಬೇಕಿಲ್ಲ ನಾವು ಎಂದು ಕಿಡಿಕಾರಿದೆ.
ಈ ಸ್ಯಾಂಟ್ರೊ ರವಿಯಂಥವರಿಗೆ ದಿನನಿತ್ಯದ ಸರ್ಕಾರಿ ಆಡಳಿತದಲ್ಲಿ ಮೂಗು ತೂರಿಸುವ ಅವಕಾಶ ನೀಡಿರುವ ಬಿಜೆಪಿ ಸರ್ಕಾರಕ್ಕೆ ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಮೂರು ಬಿಟ್ಟವರಿಂದ ಪಾಠ ಕಲಿಯಬೇಕಿಲ್ಲ ನಾವು.
3/5— Janata Dal Secular (@JanataDal_S) January 5, 2023
ಅವರಿವರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ನೀಚತನಕ್ಕೆ ಕುಮಾರಸ್ವಾಮಿ ಅವರು ಮತ್ತು ಜೆಡಿಎಸ್ ಯಾವತ್ತೂ ಇಳಿದಿಲ್ಲ. ಆದರೆ, ಸಾರ್ವಜನಿಕ ಬದುಕಿನಲ್ಲಿರುವವರ ನಡಾವಳಿಗಳು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಿದರೆ ಆ ಕುರಿತು ಮಾತನಾಡದೇ ಇರುವುದು ಜನರಿಗೆ ಮಾಡುವ ದ್ರೋಹ ಎಂದು ವಾಗ್ಧಾಳಿ ನಡೆಸಿದೆ.
ಅವರಿವರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ನೀಚತನಕ್ಕೆ ಕುಮಾರಸ್ವಾಮಿ ಅವರು ಮತ್ತು ಜೆಡಿಎಸ್ ಯಾವತ್ತೂ ಇಳಿದಿಲ್ಲ. ಆದರೆ, ಸಾರ್ವಜನಿಕ ಬದುಕಿನಲ್ಲಿರುವವರ ನಡಾವಳಿಗಳು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರಿದರೆ ಆ ಕುರಿತು ಮಾತನಾಡದೇ ಇರುವುದು ಜನರಿಗೆ ಮಾಡುವ ದ್ರೋಹ.
4/5— Janata Dal Secular (@JanataDal_S) January 5, 2023
ಸ್ಟೇ ತೆಗೆದುಕೊಂಡು ಮಂತ್ರಿಯಾಗಿ ಈವರೆಗೂ ಮುಂದುವರೆದಿರುವ ಬಿ.ಸಿ ಪಾಟೀಲ್ ಅವರೆ, ಕುಮಾರಸ್ವಾಮಿ ಬಗ್ಗೆ ಹಿಟ್ ಆ್ಯಂಡ್ ರನ್ ಅಂತ ಟೀಕಿಸಿದ್ದೀರಿ. ಮೊದಲು ಅವರು ಈಗಾಗಲೇ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಅದು ಬಿಟ್ಟು ಮಾಧ್ಯಮದ ಮುಂದೆ ಸಿನಿಮಾದಲ್ಲಿ ‘ಕೌರವ’ನಾಗಿ ಹೊಡೆದ ಒಂದು ಸಾಲಿನ ಡೈಲಾಗ್ ಗಳನ್ನೇ ಯಾಕೆ ಹೇಳುತ್ತಿದ್ದೀರಿ? ಎಂದು ಪ್ರಶ್ನಿಸಿದೆ.
ಸ್ಟೇ ತೆಗೆದುಕೊಂಡು ಮಂತ್ರಿಯಾಗಿ ಈವರೆಗೂ ಮುಂದುವರೆದಿರುವ @bcpatilkourava ಅವರೆ, ಕುಮಾರಸ್ವಾಮಿ ಬಗ್ಗೆ ಹಿಟ್ ಆ್ಯಂಡ್ ರನ್ ಅಂತ ಟೀಕಿಸಿದ್ದೀರಿ. ಮೊದಲು ಅವರು ಈಗಾಗಲೇ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಅದು ಬಿಟ್ಟು ಮಾಧ್ಯಮದ ಮುಂದೆ ಸಿನಿಮಾದಲ್ಲಿ 'ಕೌರವ'ನಾಗಿ ಹೊಡೆದ ಒಂದು ಸಾಲಿನ ಡೈಲಾಗ್ ಗಳನ್ನೇ ಯಾಕೆ ಹೇಳುತ್ತಿದ್ದೀರಿ?
5/5— Janata Dal Secular (@JanataDal_S) January 5, 2023