ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ನಿಜಕ್ಕೂ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಇದ್ದರೇ, ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಭಾಗಿಯಾಗಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸೋದಲ್ಲ, ಉಚ್ಚಾಟನೆ ಮಾಡಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು, ಜ್ವಲ್ ರೇವಣ್ಣನ ಕೃತ್ಯಗಳನ್ನು ಒಪ್ಪಿಕೊಳ್ಳುತ್ತಲೇ ಜೆಡಿಎಸ್ “ಪ್ರಜ್ವಲ್ ಅಮಾನತು“ ಎಂಬ ನಾಟಕವಾಡುತ್ತಿದೆ. ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅಮಾನತು ಮಾಡುತ್ತಿರಲಿಲ್ಲ, ಉಚ್ಚಾಟನೆ ಮಾಡುತ್ತಿದ್ದರು. ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು, ವಜಾ ಮಾಡಬೇಕಿತ್ತು ಎಂದು ಹೇಳಿದೆ.
ಇದ್ಯಾವುದನ್ನೂ ಮಾಡದೆ ಕೇವಲ ಅಮಾನತು ಎನ್ನುವುದು ಕಣ್ಣೋರೆಸುವ ತಂತ್ರವಷ್ಟೇ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪ್ರಜ್ವಲ್ ರೇವಣ್ಣನ ಹೀನ ಕೃತ್ಯವನ್ನು ಒಪ್ಪಿಕೊಳ್ಳಲು ಇನ್ನೂ ತಾಯಾರಿಲ್ಲವೇ ಅಥವಾ ಆತನ ಕೃತ್ಯವನ್ನು ಸಾಧನೆ ಎನ್ನುವಂತೆ ನೋಡುತ್ತಿವೆಯೇ? ಎ2 ಆರೋಪಿಯನ್ನು ಅಮಾನತು ಮಾಡುತ್ತೇವೆ ಎನ್ನುವ ಕುಮಾರಸ್ವಾಮಿಯವರು ಇಷ್ಟಕ್ಕೂ ಎ1 ಆರೋಪಿಯಾಗಿರುವ ರೇವಣ್ಣರ ಬಗ್ಗೆ ಮಾತೇ ಆಡುವುದಿಲ್ಲ ಏಕೆ? ಮಹಿಳೆಯರ ಘನತೆಗಿಂತ ರಾಜಕೀಯವೇ ಶ್ರೇಷ್ಠವಾಯ್ತೆ? ಎಂದು ಪ್ರಶ್ನಿಸಿದೆ.
ಪ್ರಜ್ವಲ್ ರೇವಣ್ಣನ ಕೃತ್ಯಗಳನ್ನು ಒಪ್ಪಿಕೊಳ್ಳುತ್ತಲೇ @JanataDal_S “ಪ್ರಜ್ವಲ್ ಅಮಾನತು“ ಎಂಬ ನಾಟಕವಾಡುತ್ತಿದೆ,@hd_kumaraswamy ಅವರಿಗೆ ನಿಜಕ್ಕೂ ಮಹಿಳೆಯರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ ಅಮಾನತು ಮಾಡುತ್ತಿರಲಿಲ್ಲ, ಉಚ್ಚಾಟನೆ ಮಾಡುತ್ತಿದ್ದರು.
ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು, ವಜಾ ಮಾಡಬೇಕಿತ್ತು..
ಇದ್ಯಾವುದನ್ನೂ ಮಾಡದೆ…
— Karnataka Congress (@INCKarnataka) April 30, 2024
2030ರ ವೇಳೆಗೆ ಭಾರತದ ಸೇವೆಗಳ ರಫ್ತು 800 ಬಿಲಿಯನ್ ಡಾಲರ್ ಗೆ ಏರಿಕೆ : ಗೋಲ್ಡ್ಮನ್ ಸ್ಯಾಚ್ಸ್ ವರದಿ
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ