ರಾಮನಗರ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರೆ, ಇತ್ತ ಕಾಂಗ್ರೆಸ್ ಕೂಡ ವಿಪಕ್ಷಗಳಿಗೆ ಕೌಂಟರ್ ನೀಡಲು ಜನಾಲಂದನ ಕಾರ್ಯಕ್ರಮ ಅನ್ಕೊಂಡಿದ್ದು ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಏಕವಚನದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಜನಾಲೊಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಲಾಕ್ ಮೇಲ್ ಕುಮಾರಸ್ವಾಮಿ, ನೀನು ಹಿಟ್ ಆಂಡ್ ರನ್ ಕುಮಾರಸ್ವಾಮಿ ನೀನು. ಪಾದಯಾತ್ರೆಗೆ ಬರಲ್ಲ ಅಂದಲ್ಲ ಯಾಕೆ ನಡೀತಿದೆಯಾ? ಎಲ್ಲವೂ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷ ಮುಳುಗಿ ನಿಮ್ಮ ಪಾಪದ ಕೊಡ ಮುಳುಗಿ ಪಾಪ ವಿಮೋಚನೆಗಾಗಿ ಈ ಒಂದು ಪಾದಯಾತ್ರೆಯಲ್ಲಿ ನಡಿತಿದಿಯಾ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯವರೇ ನಿಮ್ಮ ಬಳಿ ಎಷ್ಟೆಲ್ಲ ಜಮೀನು ಇದೆ ಎಂದು ಹೇಳಿ. ಕುಮಾರಸ್ವಾಮಿ ನಿನ್ನ ಆಸ್ತಿ ಪಟ್ಟಿ ಇನ್ನೂ ಬಿಡುಗಡೆ ಮಾಡಿಲ್ಲ. ನಿನ್ನ ಸೋದರ ಕುಟುಂಬದ ಆಸ್ತಿ ಪಟ್ಟಿ ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡ್ತೀನಿ. ನಿನ್ನ ಮೈನಿಂಗ್ ಡಿ ನೋಟಿಫಿಕೇಷನ್ ಹೇಳುತ್ತೇನೆ ಎಂದು ಕಾಂಗ್ರೆಸ್ ಜನಂದೋಲನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬಿಜೆಪಿಯವರದ್ದು ಪಾಪ ವಿಮೋಚನಾ ಪಾದಯಾತ್ರೆ ಅವರು ಮಾಡಿದಂತಹ ಎಲ್ಲ ಪಾಪಗಳನ್ನು ವಿಮೋಚನೆ ಮಾಡಿಕೊಳ್ಳುವುದಕ್ಕೆ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇಂದಿರಾಗಾಂಧಿಯವರು ಒಂದು ಮಾತು ಹೇಳಿದ್ದಾರೆ. ಅವಕಾಶಗಳನ್ನ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ನೀವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಅಂತ ಹೇಳಿದ್ದಾರೆ.
ಈ ಪಾದಯಾತ್ರೆ ಪ್ರಾರಂಭ ಮಾಡಿ ನಾವು ಬಿಜೆಪಿ ಮತ್ತು ಜೆಡಿಎಸ್ ನವರು ಅವರು ಮಾಡಿದ ಪಾಪದ ಕೊಡಕ್ಕೆ ಉತ್ತರವನ್ನು ಕೊಡಿ ಅಂತ ಕೇಳುವಂತಹ ಅವಕಾಶ ಮಾಡಿಕೊಟ್ಟು, ಇಡೀ ರಾಜ್ಯಕ್ಕೆ ಅವರ ಪಾಪದ ಕೊಡದಲ್ಲಿ ಭ್ರಷ್ಟಾಚಾರದಲ್ಲಿ ಏನು ತೊಡಗಿದ್ದಾರೊ, ಬಿಜೆಪಿ ಕುಟುಂಬದವರು, ಮಂತ್ರಿಗಳು ಕುಮಾರಸ್ವಾಮಿ ಕುಟುಂಬದವರು ಎಲ್ಲರೂ ಸೇರಿ ಏನು ಕೊಡ ತುಂಬಿ ತುಳುಕುತ್ತಿದೆಯೋ ಅದಕ್ಕೆ ನಾವು ಉತ್ತರ ಕೇಳುವುದಕ್ಕೆ ಈ ಅವಕಾಶ ಮಾಡಿಕೊಟ್ಟಿದ್ದಾರೆ.