ಬೆಂಗಳೂರು : ಬಿಡಿಎ ಆಯುಕ್ತ ಎಂ.ಬಿ ರಾಜೇಶ್ ಗೌಡ ಅವ್ರನ್ನ ಎತ್ತಂಗಡಿ ಮಾಡಲಾಗಿದ್ದು, ನೂತನ ಆಯುಕ್ತರಾಗಿ ಕುಮಾರ್ ನಾಯ್ಕ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಂಧನ ಇಲಾಖೆಯ ಎಸಿಎಸ್ ಆಗಿರುವ ಕುಮಾರ್ ನಾಯ್ಕ್ ಅವ್ರಿಗೆ ಸಧ್ಯ ಹೆಚ್ಚುವರಿ ಹೊಣೆ ವಹಿಸಲಾಗಿದ್ದು, ನೂತನ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಈವರಗೆ ಬಿಡಿಎ ಆಯುಕ್ತಕಾಗಿದ್ದ ಎಂ.ಬಿ ರಾಜೇಶ್ ಗೌಡ ವರ್ಗಾವಣೆ ಮಾಡಿದೆ. ಇನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಕುಮಾರ್ ನಾಯ್ಕ್ ಇಂಧನ ಇಲಾಖೆ ಜತೆಯಲ್ಲಿ ಬಿಡಿಎ ಹೊಣೆ ನೀಡಲಾಗಿದೆ
ಅಂದ್ಹಾಗೆ, ಸುಪ್ರಿಂಕೋರ್ಟ್ ಆದೇಶಕ್ಕೆ ಅಗೌರವ ಹಿನ್ನೆಲೆ ಕೋರ್ಟ್ ಚಾಟಿ ಬೀಸಿತ್ತು. ಇನ್ನು ರಾಜೇಶ್ ಗೌಡ ಎತ್ತಂಗಡಿಗೆ ಸೂಚಿಸಿತ್ತು.