ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಾಳೆ 63ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿಗಮ ಆಯೋಜಿಸಿದೆ.
ನಾಳಿನ ಕೆ ಎಸ್ ಆರ್ ಟಿ ಸಿ 63ನೇ ಸಂಸ್ಥಾಪನಾ ದಿನಾಚರಣೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಕೆ ಎಸ್ ಆರ್ ಟಿಸಿಯ ಅಧ್ಯಕ್ಷರು ಹಾಗೂ ಶಾಸಕ ಎಸ್.ಆರ್ ಶ್ರೀನಿವಾಸ್ ಉಪಸ್ಥಿತರಿರಲಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ ಎಸ್ ಆರ್ ಟಿಸಿ ಉಪಾಧ್ಯಕ್ಷರಾದಂತ ಮೊಹಮ್ಮದ್ ರಿಜ್ವಾನ್ ನವಾಬ್, ವಿಶೇಷ ಆಹ್ವಾನಿತರಾಗಿ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್ ವಿ ಪ್ರಸಾದ್ ಭಾಗಿಯಾಗಲಿದ್ದಾರೆ.
ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮಗಳ ವಿವರ
- ಮೊದಲ ಬಾರಿಗೆ ಪುನಶ್ಚೇತನಗೊಂಡ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ ದೊರೆಯಲಿದೆ.
- ಅಪಘಾತದಲ್ಲಿ ಮೃತರ ಅವಲಂಬಿತ ಮೂವರಿಗೆ ಸಾರಿಗೆ ಸುರಕ್ಷಾ ವಿಮಾ ಯೋಜನೆಯಡಿ ತಲಾ 1 ಕೋಟಿ ರೂಪಾಯಿಗಳ ಚೆಕ್ ವಿತರಣೆ ಮಾಡಲಾಗುತ್ತದೆ.
- ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಮೃತರಾದಂತ 37 ಅವಲಂಬಿತರಿಗೆ ತಲಾ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗುತ್ತದೆ.
- ನಿಗಮದ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ ಹಾಗೂ ವಾಹನಗಳ ಪುನಶ್ಚೇತನ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ.
- ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತರಿಗೆ ಸ್ವಚ್ಚತಾಗಾರ ಹುದ್ದೆಗೆ 45 ಮೃತ ಅವಲಂಬಿತರಿಗೆ ನೇಮಕಾತಿ ಆದೇಶ ವಿತರಣೆ ಮಾಡಲಾಗುತ್ತದೆ.
- ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತರ ಅವಲಂಬಿತರಿಗೆ ಕೆ ಎಸ್ ಟಿ ಕಾನ್ಸ್ ಟೇಬಲ್ ಹುದ್ದೆಗೆ 103 ಮೃತ ಅವಲಂಬಿತರಿಗೆ ನೇಮಕಾತಿ ಆದೇಶ ವಿತರಿಸಲಾಗುತ್ತದೆ.
- ಅನುಕಂಪದ ಆಧಾರದ ಮೇಲೆ ನೇಮಕಗೊಂಡ 4 ಮೃತ ಅವಲಂಬಿತರಿಗೆ ತಾಂತ್ರಿಕ ಸಹಾಯಕ ಹಾಗೂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಿಸಲಾಗುತ್ತದೆ.
- ಪ್ರಾದೇಶಿಕ ಕಾರ್ಯಾಗಾರಗಳಲ್ಲಿನ ಕ್ಯಾಂಟೀನ್ ನವೀಕರಣಕ್ಕೆ ನಗದು ಘೋಷಣೆಯಾಗಲಿದೆ.
- ಕಳೆದ 22 ತಿಂಗಳುಗಳಲ್ಲಿ ಶೂನ್ಯ ಅಪಘಾತ ದಾಖಲಿಸಿದ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ವಿತರಿಸಲಾಗುತ್ತದೆ.