ಬೆಂಗಳೂರು: ಸಾರಿಗೆ ನಿಗಮದ ಇತಿಹಾಸದಲ್ಲೇ ಕೆ ಎಸ್ ಆರ್ ಟಿಸಿಯು ( KSRTC ) ಒಂದೇ ದಿನದಲ್ಲಿ ಅತ್ಯಧಿಕ ರೂ.22.64 ಕೋಟಿ ಆದಾಯವನ್ನು ಗಳಿಸಿ, ಹೊಸ ದಾಖಲೆಯನ್ನು ಬರೆದಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ( Karnataka State Road Transport Corporation – KSRTC ) ಮಾಹಿತಿ ಬಿಡುಗಡೆ ಮಾಡಿದ್ದು, ನಾಡಹಬ್ಬ ದಸರಾ ಸಂಭ್ರಮದಲ್ಲಿ, ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ನಿಗಮಕ್ಕೆ ಯಾವುದೇ ಹೊಸ ಬಸ್ಸುಗಳ ಸೇರ್ಪಡೆಯಾಗಿರುವುದಿಲ್ಲ. ಸಿಬ್ಬಂದಿಗಳ ವರ್ಗಾವಣೆ, ನಿವೃತ್ತಿಯಿಂದ ತೆರವಾದ ಸ್ಥಳಗಳಿಗೆ ಹೊಸ ನೇಮಕಾತಿಯು ಕೂಡ ಆಗಿರುವುದಿಲ್ಲ. ಆದಾಗ್ಯೂ ನಿಗಮವು ದಿನಾಂಕ 10-10-2022ರಂದು ರೂ.22.64 ಕೋಟಿಗಳ ಅತಿಹೆಚ್ಚು ಸಾರಿಗೆ ಆದಾಯವನ್ನು ಗಳಿಸಲು ಸಾಧ್ಯವಾಗಿರುವುದು ಸಮಸ್ಯ ಸಿಬ್ಬಂದಿಗಳ ಅವಿರತ ಪರಿಶ್ರಮ, ದಕ್ಷತೆ ಹಾಗೂ ಬದ್ಧತೆಗೆ ಸಂದ ಪ್ರತಿಫಲವಾಗಿದ್ದು, ಕೆ ಎಸ್ ಆರ್ ಟಿಸಿಯು ಮತ್ತೊಮ್ಮೆ ಜನರ ಜೀವನಾಡಿ ಎಂಬುದು ಸಾಬೀತಾಗಿದೆ ಎಂದು ತಿಳಿಸಿದೆ.
WATCH VIDEO : ಅಬ್ಬಬ್ಬಾ.. ಮೈ ನವಿರೇಳಿಸುವ ಮುಂಗುಸಿ-ನಾಗರಹಾವಿನ ಕಾದಾಟ..ನೀವು ನೋಡಿ
ಇನ್ನೂ ಮುಂದಿನ ದಿನಗಳಲ್ಲಿ ನಿಗಮದ ಶ್ರೇಯೋಭಿವೃದ್ಧಿಗಾಗಿ ನಾವೆಲ್ಲರೂ ಮತ್ತಷ್ಟು ಉತ್ಸಾಹ ಹಾಗೂ ಕರ್ತವ್ಯ ತತ್ಸರತೆಯಿಂದ ದುಡಿಯುವ ಅಭಿಲಾಷೆ ವ್ಯಪ್ಕ ಪಡಿಸುತ್ತಾ, ನಿಗಮಕ್ಕೆ ದಾಖಲೆಯ ಆದಾಯ ಗಳಿಸಲು ಶ್ರಮಿಸಿರುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ಮತ್ತು ಅವರ ಕುಟುಂಬದವರಿಗೆ ಹಾಗೂ ಪ್ರಯಾಣಿಕರಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸಾರಿಗೆ ನಿಗಮ ತಿಳಿಸಿದೆ.