ಬೆಂಗಳೂರು: ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ”ಮಾರ್ಗದಲ್ಲಿ ಕರ್ನಾಟಕ ಸಾರಿಗೆ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಪ್ಯಾಕೇಜ್ ಟೂರನ್ನು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ದಿನಾಂಕ 20/07/2024 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುತ್ತದೆ ಅಂತ ತಿಳಿಸಿದೆ.
“ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಪ್ಯಾಕೇಜ್ ಟೂರ್ ವೇಳಾಪಟ್ಟಿ
ಬೆಂಗಳೂರಿನಿಂದ ಮದ್ದೂರು 0630-0830 ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ
ಮದ್ದೂರಿನಲ್ಲಿ ಉಪಹಾರದ ಸಮಯ 0830-0900
ಮದ್ದೂರಿನಿಂದ ಸೋಮನಾಥಪುರ 0900-0945
ಸೋಮನಾಥೇಶ್ವರ ದರ್ಶನ 0945-1045
ಸೋಮನಾಥಪುರದಿಂದ ತಲಕಾಡು 1045-1130
ತಲಕಾಡು ಪಂಚಲಿಂಗ ದರ್ಶನ/ಮಧ್ಯಾಹ್ನದ ಊಟ 1130-1500
ತಲಕಾಡಿನಿಂದ ಮಧ್ಯರಂಗ 1500-1545
ರಂಗನಾಥ ಸ್ವಾಮಿ ದರ್ಶನ 1545-1555
ಮಧ್ಯರಂಗದಿಂದ ಭರಚುಕ್ಕಿ 1555-1605
ಭರಚುಕ್ಕಿ ವೀಕ್ಷಣೆ 1605-1700
ಭರಚುಕ್ಕಿಯಿಂದ ಗಗನಚುಕ್ಕಿ 1700-1715
ಗಗನಚುಕ್ಕಿ ವೀಕ್ಷಣೆ 1715-1815
ಗಗನಚುಕ್ಕಿಯಿಂದ ಬೆಂಗಳೂರು 1815-2100
ಪ್ಯಾಕೇಜ್ ಟೂರ್ ಸಾರಿಗೆಗಳ ಪ್ರಯಾಣದರದ ವಿವರಗಳು
ಪ್ರಯಾಣಿಕರು ಕರ್ನಾಟಕ ಸಾರಿಗೆ ಪ್ರಯಾಣ ದರ (ರೂ.ಗಳಲ್ಲಿ) ವಯಸ್ಕರಿಗೆ ರೂ. 500-00, ಮಕ್ಕಳಿಗೆ (6 ರಿಂದ 12 ವರ್ಷ) ರೂ. 350-00
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಜೋಗ್ ಫಾಲ್ಸ್’ಗೆ ತೆರಳೋ ಪ್ರವಾಸಿಗರಿಗೆ ಗುಡ್ ನ್ಯೂಸ್: KSRTCಯಿಂದ ‘ಟೂರ್ ಪ್ಯಾಕೇಜ್’ ಘೋಷಣೆ | Jog Falls Trip
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ