ಗದಗ: ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಯಡವಟ್ಟು ಆಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯ ಪರಿವಾಹನ ಎಂದು ಮುದ್ರಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪ್ರೀತಿಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIGG NEWS: ರಮೇಶ್ ಜಾರಕಿಹೊಳಿ ಕಲ್ಲು ಹೊಡೆಯಬಾರದೆಂದು ಚಾಕೊಲೇಟ್ ತಿನ್ನಿಸುತ್ತಿದ್ದಾರೆ: ಸತೀಶ ಜಾರಕಿಹೊಳಿ ವ್ಯಂಗ್ಯ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್ಸಿನ ಟಿಕೆಟ್ ಮೇಲೆ ವಾ. ಕ. ರ. ಸಾ ಸಂಸ್ಥೆ ಗದಗ ಘಟಕ ಅಂತಾ ಮುದ್ರಿಸಲಾಗಿದೆ.
ಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಅಂತಾ ಪ್ರಿಂಟ್ ಮಾಡಲಾಗಿದ್ದು, ಒಂದು ಕ್ಷಣ ಟಿಕೆಟ್ ನೋಡಿ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ.ಇದೇನು ಮಹಾರಾಷ್ಟ್ರವೋ ಕರ್ನಾಟಕವೋ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.