ಹೊನ್ನಾವರ: ಇಲ್ಲಿನ ಗೇರುಸೊಪ್ಪ ಸಮೀಪದ ಸುಳಿಮುರ್ಕಿ ಕ್ರಾಸ್ ನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿಯಾಗಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಈ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಹೊನ್ನಾವರದ ಗೇರುಸೊಪ್ಪ ಬಳಿಯಲ್ಲಿ ಪಲ್ಟಿಯಾಗಿದೆ. ಈ ಬಸ್ಸಿನಲ್ಲಿ 40 ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. ಬಸ್ ಪಲ್ಟಿಯಾಗಿದ್ದರಿಂದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೂ ಬಸ್ ಪಲ್ಟಿಯಿಂದಾಗಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಅವರಿಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ನೀವು ‘CM ಸಿದ್ಧರಾಮಯ್ಯ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿ ಸಾಕು, ನಿಮ್ಮ ‘ಸಮಸ್ಯೆ ಕ್ಲಿಯರ್’
ಹಾವೇರಿ: ನ.3ರಂದು ‘ತುಳಜಾಭವಾನಿ ದೇವಿ’ಯ 26ನೇ ವರ್ಷದ ಜಾತ್ರಾ ಮಹೋತ್ಸವ








