ಕಲಬುರ್ಗಿ: ಜಿಲ್ಲೆಯಲ್ಲಿ ಇಂದು ಕೆಎಸ್ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಕಲಬುರ್ಗಿ ಜಿಲ್ಲೆಯ ಅಳಂದ ಬಳಿಯ ಮಿನಿ ವಿಧಾನಸೌಧದ ಬಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಸಿದ್ದಲಿಂಗಯ್ಯ ಹಾಗೂ ಅವರ ಸಹೋದರನ ಮಗ 8 ವರ್ಷದ ಸಂಕೇತ್ ಎಂಬುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನದಲ್ಲಿ ಜಾಲಿ ರೈಡ್ ವೇಳೆ ಜಮೀನಿಗೆ ಉರುಳಿದ ಕಾರು : ಇಬ್ಬರು ಯುವಕರ ದಾರುಣ ಸಾವು
ಹಾಸನ : ಹುಟ್ಟುಹಬ್ಬ ಆಚರಿಸಿಕೊಳ್ಳಲು ಜಾಲಿ ರೈಡ್ ಮಾಡುತ್ತಿದ್ದ ಯುವಕರ ಕಾರು ಒಂದು ಅಪಘಾತಕ್ಕೆ ಈಡಾಗಿ ಜಮೀನಿನಲ್ಲಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಬರ್ತಡೇ ಸೆಲೆಬ್ರೇಶನ್ ವೇಳೆ ಯುವಕರು ಜಾಲಿ ರೈಡ್ ಹೋಗುವಾಗ ಅಪಘಾತ ನಡೆದಿದು, ಕಾರಿನಲ್ಲಿದ್ದ ರಕ್ಷಿತ್(24) ಕುಶಾಲ್ (22) ಮೃತ ದುರ್ದೈವಿಗಳೇ ಆಗಿದ್ದಾರೆ.ಅಪಘಾತವು ಹಾಸನ ತಾಲೂಕಿನ ಮಡೆನೂರು ಬಳಿ ನಿನ್ನೆ ರಾತ್ರಿ ನಡೆದ ಘಟನೆಯಾಗಿದೆ.
ಯುವಕರು ಜಾಲಿ ರೈಡ್ ಮಾಡುವ ವೇಳೆ ಎಲೆಕ್ಟ್ರಿಕ್ ಪೋಲ್ ಗೆ ಡಿಕ್ಕಿ ಹೊಡೆದು ಜಮೀನಿನಲ್ಲಿ ಕಾರು ಉರುಳಿ ಬಿದ್ದಿದೆ.ರಕ್ಷಿತ್ ಸ್ಥಳದಲ್ಲಿ ಸಾವನ್ನಪ್ಪಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದ ಕುಶಾಲ್ ಕೊನೆಯುಸಿರೆಳಿದಿದ್ದಾನೆ. ಅಭಿಷೇಕ್, ಅಮಿ ಶಾಂತ ಮಂಜುನಾಥ್, ಎಂಬವರಿಗೆ ಗಂಭೀರವಾದಂತಹ ಗಾಯಗಳಾಗಿವೆ.ಗಯಾಳುಗಳಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹುಟ್ಟು ಹಬ್ಬದ ಆಚರಣೆಗೆ ಬಂದಿದ್ದ ಚಿನ್ನರಾಯಪಟ್ಟಣದ ಯುವಕರು ಎಂದು ಹೇಳಲಾಗುತ್ತಿದ್ದು ಗಿರೀಶ್ ಎಂಬುವವರಿಂದ ಕುಶಾಲ್ ಕಾರು ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ.ಅಪಘಾತದಲ್ಲಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ ಶಾಂತಿಗ್ರಾಮ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವಂತಹ ಘಟನೆಯಾಗಿದೆ.
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’