ಬೆಂಗಳೂರು : ರಾಜ್ಯದಲ್ಲಿ ಉತ್ತಮ ಸಾರಿಗೆ ಸಂಚಾರ ಹಾಗೂ ಒಳ್ಳೆಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿಗೆ ಆಗಾಗ ಪ್ರಶಸ್ತಿಗಳು ಬರುತ್ತಲೇ ಇರುತ್ತವೆ. ಇದೀಗ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ಐದು ರಾಷ್ಟ್ರೀಯ ಹಾಗೂ ಒಂದು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮಾನವ ಸಂಪನ್ಮೂಲ, ಅತ್ಯುತ್ತಮ ಗ್ರಾಹಕರ ಸೇವೆ, ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ, ಸೇರಿದಂತೆ ಇನ್ನೂ ಹಲವಾರು ವಿಭಾಗಗಳಲ್ಲಿ ಕೆಎಸ್ಆರ್ಟಿಸಿ ಹೀಗೆ ಇದೀಗ ಪ್ರಶಸ್ತಿಗಳು ಲಭಿಸಿದೆ. ಪ್ರಶಸ್ತಿಗಳ ಪಟ್ಟಿ ಈ ಕೆಳಗಿನಂತಿದೆ.
1. ಮಾನವ ಸಂಪನ್ಮೂಲ ಉಪ ಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ ದಿನಾಂಕ 15ನೇ ಮಾರ್ಚಿ 2024 ರಂದು ಚಂದೀಗಡ್.
2. ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ ಉದ್ದಿಮೆಯ ಸ್ಟಾರ್ ಆಪ್ ಎಕ್ಸಲೆನ್ಸ್ ಪ್ರಶಸ್ತಿ ದಿನಾಂಕ: 21ನೇ ಮಾರ್ಚ 2024 ರಂದು ನವದೆಹಲಿ
3. ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಸತತ ವಿನೂತನ ಉಪಕ್ರಮ ಗಳಿಗಾಗಿ ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿಯನ್ನು ದಿನಾಂಕ: 21ನೇ ಮಾರ್ಚ 2024 ರಂದು ನವದೆಹಲಿ
4. ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ಗೌರ್ವನೆನ್ಸ್ ನೌ 10ನೇ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿಯನ್ನು ದಿನಾಂಕ: 22ನೇ ಮಾರ್ಚ 2024 ರಂದು ನವದೆಹಲಿ
5. ಈಶಾನ್ಯ ಭಾರತ ನಾಯಕತ್ವ ಪ್ರಶಸ್ತಿಯು ನಿಗಮಕ್ಕೆ ಅತ್ಯುತ್ತಮ ವಿನೂತನ ವಾಹನ ಸಮೂಹ ನಿರ್ವಹಣೆಗಾಗಿ, ಅಸ್ಸಾಂ ,ಗುವಾಹತಿ
6. ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿಯು ನಿಗಮಕ್ಕೆ ಅತ್ಯುತ್ತಮ ಉಪಕ್ರಮ ವರ್ಗದಡಿ ಬಸ್ ಬ್ರಾಂಡ್ ನಿರ್ವಹಣೆಗಾಗಿ ಲಭಿಸಿರುತ್ತದೆ.