ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆದ್ದರೇ, ಶಿವಮೊಗ್ಗ ವಿಭಾಗದ ಸಂಚಾಲಕರಾಗಿ ಡಿ ಎಸ್ ಅರುಣ್ ಅವರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಯ ಆಡಳಿತ ಮಂಡಳಿ ಸ್ಥಾನಗಳಿಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶದಲ್ಲಿ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಡಿ ಎಸ್ ಅರುಣ್ ಅವರು ನೂತನವಾಗಿ ಶಿವಮೊಗ್ಗ ವಲಯ ಸಂಚಾಲಕರಾಗಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಗೆಲುವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಲಯದಲ್ಲಿನ ಕ್ರಿಕೆಟ್ ಅಭಿವೃದ್ಧಿ, ತರಬೇತಿ ಮತ್ತು ಪ್ರತಿಭೆಗಳನ್ನು ಬೆಳೆಸುವುದು, ಪಾರದರ್ಶಕ ಮತ್ತು ಪರಿಣಾಮಕಾರಿ ಆಯ್ಕೆ ಪ್ರಕ್ರಿಯೆ, ಕ್ರಿಕೆಟ್ ಪಂದ್ಯಗಳು ಮತ್ತು ಟೂರ್ನಮೆಂಟ್ ಗಳ ಸಮನ್ವಯ, ಮೂಲಸೌಕರ್ಯ ಅಭಿವೃದ್ಧಿ, ಶಿಸ್ತಿನ ಪಾಲನೆಯ ಮತ್ತು ನಿಯಮಾವಳಿ ಅನುಸರಣೆ ಹೀಗೆ ಹಲವು ಗುರಿಗಳನ್ನು ಹೊಂದಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಸೀದಿಗಳಲ್ಲಿ ಅಝಾನ್ ಶಬ್ದಮಿತಿ ಉಲ್ಲಂಘನೆ: ಸಚಿವರ ಉತ್ತರ ವಿಳಂಬಕ್ಕೆ MLC ಡಿ.ಎಸ್.ಅರುಣ್ ಕಿಡಿ








