ಶಿವಮೊಗ್ಗ : ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೂ ತೊಂದರೆಯಿಲ್ಲ, ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ ಈ ಬಾರಿ ಟಿಕೆಟ್ ಸಿಗಲ್ಲ ಎಂಬ ವದಂತಿಗೆ ಪ್ರತಿಕ್ರಿಯಿಸದ ಈಶ್ವರಪ್ಪ, ಟಿಕೆಟ್ ನೀಡದಿದ್ದರೂ ಯಾವುದೇ ತೊಂದರೆಯಿಲ್ಲ, ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದಿದ್ದಾರೆ
ನಾನು ಎಂದಿಗೂ ಕೂಡ ಟಿಕೆಟ್ ಗಾಗಿ, ಕುರ್ಚಿಗಾಗಿ ಆಸೆ ಇಟ್ಟುಕೊಳ್ಳುವುದಿಲ್ಲ, ವಯಸ್ಸು 75 ದಾಟಿದ್ದು, ಈಗಲೂ ಕೂಡ 25ರ ಯುವಕನಂತೆ ಕೆಲಸ ಮಾಡುತ್ತೇನೆ, ಟಿಕೆಟ್ ನೀಡದೇ ಹೋದರೆ ನಾನು ಬೇಸರ ಪಟ್ಟುಕೊಳ್ಳುವುದಿಲ್ಲ ಎಂದರು.
BIGG BREAKING NEWS : ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಸ್ಪತ್ರೆಗೆ ದಾಖಲು