ಬೆಂಗಳೂರು: ನಗರದಲ್ಲಿ 50,000 ಲಂಚ ಸ್ವೀಕರಿಸುತ್ತಿದ್ದಾಗೇ ಲೋಕಾಯುಕ್ತ ಬಲೆಗೆ ಕೆಆರ್ ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ( PI) ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ಬಿದ್ದಿದ್ದಾರೆ.
ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಆಣೆಯ ಇನ್ಸ್ ಪೆಕ್ಟರ್ ವಜ್ರಮುನಿ ಹಾಗೂ ಪಿಎಸ್ಐ ರಮ್ಯಾ ಅವರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಂತ ಆರೋಪಿಯೊಬ್ಬನ ಬಿಡುಗಡೆಗಾಗಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.
ಇಂದು ಕೆಆರ್ ಪುರಂ ಠಾಣೆಯ ಇನ್ಸ್ ಪೆಕ್ಟರ್ ವಜ್ರಮುನಿ ಹಾಗೂ ಪಿಎಸ್ಐ ರಮ್ಯಾ ಅವರಿಗೆ 5 ಲಕ್ಷದಲ್ಲಿ 50,000 ಮೊದಲ ಕಂತಿನ ಹಣವನ್ನು ಈಗಾಗಲೇ ಪಡೆದಿದ್ದರು. ಇಂದು 1 ಲಕ್ಷ ಹಣವನ್ನು ವ್ಯಕ್ತಿ ನೀಡೋದಕ್ಕೆ ತೆರಳಿದ್ದರು. ಈ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರಿಗೂ ನೀಡಿದ್ದರು.
ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಂತ ಆರೋಪಿಯನ್ನು ಬಿಡುಗಡೆ ಮಾಡೋದಕ್ಕೆ 1 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಕೆಆರ್ ಪುರಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಜ್ರಮುನಿ, ಪಿಎಸ್ಐ ರಮ್ಯಾ ರೆಡ್ ಹ್ಯಾಂಡ್ ಆಗೇ ಸಿಕ್ಕಿಬಿದ್ದಿದ್ದಾರೆ.
ನಾನು ಮಾಜಿಯಾದರು ಏನಾದ್ರೂ ನಿಮ್ಮ ಕೆಲಸ ಆಗ್ಬೇಕಾ? ನನಗೆ ಕರೆ ಮಾಡಿ- ಪ್ರತಾಪ್ ಸಿಂಹ