Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ʻKPTCLʼ 902 ಹುದ್ದೆಗಳ ಭರ್ತಿಗೆ ʻನೇಮಕʼ ಆದೇಶ : ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ
KARNATAKA

ʻKPTCLʼ 902 ಹುದ್ದೆಗಳ ಭರ್ತಿಗೆ ʻನೇಮಕʼ ಆದೇಶ : ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ

By kannadanewsnow57

ಬೆಂಗಳೂರು : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (KPTCL) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿತ್ತು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಂತಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಣೆ ಮಾಡಲಾಗಿದೆ. 

ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಇಂಜಿನಿಯರ್‌(ವಿದ್ಯುತ್‌), 17 ಸಹಾಯಕ ಇಂಜಿನಿಯರ್(ಸಿವಿಲ್), 15-ಕಿರಿಯ ಇಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ.

ಅದೇ ರೀತಿ, 535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಇಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್‌ ನಡೆಸಿ ನೇಮಕ ಆದೇಶ ನೀಡಲಾಗಿದೆ. ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದವರಾಗಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರು.

ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಮಾತನಾಡಿ, ರಾಜ್ಯಾದ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿದ್ಯುತ್‌ ಪ್ರಸರಣ ಸೇವೆ ಒದಗಿಸುವುದು ನಮ್ಮ ಬದ್ಧತೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳಿಗೆ ಕೆಲಸದ ಆದೇಶ ನೀಡಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಅಂತ ತಿಳಿಸಿದ್ದಾರೆ.

ಇನ್ನೂ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು, 902 ಹೊಸ ಉದ್ಯೋಗಿಗಳ ನೇಮಕದ ಮೂಲಕ ಕೆಪಿಟಿಸಿಎಲ್‌ ಇನ್ನಷ್ಟು ಬಲಗೊಂಡು, ಗುಣಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಆಯ್ಕೆ ಪ್ರಕ್ರಿಯೆಯನ್ನುಅತ್ಯಂತ ಪಾರದರ್ಶಕ ಮತ್ತು ಸಮರ್ಥವಾಗಿ ನಡೆಸಲಾಗಿದೆ ಎಂದಿದ್ದಾರೆ.

KPTCL to fill up 902 vacancies: Power Minister K.J. George Information ʻKPTCLʼ 902 ಹುದ್ದೆಗಳ ಭರ್ತಿಗೆ ʻನೇಮಕʼ ಆದೇಶ : ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ
Share. Facebook Twitter LinkedIn WhatsApp Email

Related Posts

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

1 Min Read

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

1 Min Read

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

1 Min Read
Recent News

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಸೇನಾ ಕ್ಯಾಪ್ಟನ್ ಪ್ರೇಯಸಿಗೆ ಮಾಡಿದ ಪ್ರಪೋಸ್ ಪುಲ್ ವೈರಲ್; ನೆಟ್ಟಿಗರ ಕಾಮೆಂಟ್ ಸುರಿಮಳೆ

​ನಾರ್ವೆ ಚೆಸ್: ಗುಕೇಶ್ ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ; ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ!

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

State News
KARNATAKA

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು : ಇಂಧನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಹಾಗೂ ಖಾತೆ ಹಂಚಿಕೆ ಕುರಿತು ಅಸಮಾಧಾನ ಇಲ್ಲ ಎಂದಿರುವ ಇಂಧನ…

BREAKING: ಕಲಬುರ್ಗಿಯಲ್ಲಿ ಪ್ರೀತಿ ನಿರಾಕರಣೆಯ ಭೀತಿಯಲ್ಲಿ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

BREAKING: ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ ಇಳಿಸಿದ ಕಾಂಗ್ರೆಸ್

BREAKING: ಧಾರವಾಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗೆ ಪ್ರಾಧ್ಯಾಪಕನಿಂದಲೇ ಕಿರುಕುಳ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.