Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

20 ವರ್ಷಗಳ ಬಳಿಕ ಮತ್ತೆ ಜಪಾನ್‌ನಿಂದ ಭಾರತೀಯ ಮಾವಿನ ಹಣ್ಣುಗಳ ಆಮದಿಗೆ ತಡೆ: ಕಾರಣವೇನು?

ಈದ್ ಬಲಿಪೀಠದಿಂದ ಪಾರಾದ ‘ಟ್ರಂಪ್’ ಎಮ್ಮೆ: ಇದೀಗ ಢಾಕಾ ಮೃಗಾಲಯದಲ್ಲಿ ಸಂರಕ್ಷಣೆ !

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್‌ಗೆ ಈದ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 4,48 ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿದ KPTCL
KARNATAKA

4,48 ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿದ KPTCL

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ನೇಮಕಾತಿ ಪ್ರಕ್ರಿಯೆಯನ್ನು ಗುರುವಾರ ಯಶಸ್ವಿಯಾಗಿ ಪೂರ್ಣಗೊಳಿಸಿತು.

ಕೆಪಿಟಿಸಿಎಲ್‌ನ ಲೆಕ್ಕಾಧಿಕಾರಿಗಳ ಸಂಘದ ಸಭಾಂಗಣದಲ್ಲಿ ಡಿಸೆಂಬರ್ 10 ಮತ್ತು 11, 2025 ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಯಿತು. ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನೇತೃತ್ವದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡು, 448 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನಿಗಮದ ಉನ್ನತಾಧಿಕಾರಿಗಳು ವಿತರಿಸಿದರು.

ಎರಡು ದಿನಗಳ ಕಾಲ ನಡೆದ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಂತ್ರಾಂಶವನ್ನು ನಿಗಮದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಅಭಿವೃದ್ದಿ ಪಡಿಸಿದ್ದರು.

ಕೆಪಿಟಿಸಿಎಲ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವಂತೆ ಒಟ್ಟು 491 ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಗೊಂಡಿದ್ದು, ಈ ಪೈಕಿ 448 ಅಭ್ಯರ್ಥಿಗಳಿಗೆ ಈಗ ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ. ಉಳಿದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅವರ ಮೀಸಲಾತಿ ನೈಜತೆ ಪ್ರಮಾಣಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರಗಳು ಸ್ವೀಕೃತಗೊಂಡ ನಂತರ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ನೇಮಕಾತಿ ಕೌನ್ಸೆಲಿಂಗ್‌ನಲ್ಲಿ ರಾಜ್ಯದ ವಿವಿದೆಢೆಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದರು, ಇವರುಗಳಲ್ಲಿ ಮಾಜಿ ಸೈನಿಕರು, ಶ್ರವಣದೋಷ ಅಭ್ಯರ್ಥಿಗಳು ಮತ್ತು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಭಾಗಿಯಾಗಿದ್ದರು.

ಅಕ್ಟೋಬರ್ 14, 2024ರ ಉದ್ಯೋಗ ಪ್ರಕಟಣೆ ಪ್ರಕಾರ ಈ ನೇಮಕಾತಿಯನ್ನು ಹತ್ತನೇ ತರಗತಿ ಅಂಕಗಳ ಜೇಷ್ಠತೆ ಹಾಗೂ ಮೇ ತಿಂಗಳಲ್ಲಿ ನಡೆಸಿದ ಸಹನ ಶಕ್ತಿ ಪರೀಕ್ಷೆಯ ಅರ್ಹತೆಯ ಆಧಾರದ ಮೇಲೆ ಆಗಸ್ಟ್ ತಿಂಗಳಿನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಲಾಯಿತು. ರಾಜ್ಯದಾದ್ಯಂತ 70,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.

ನಮ್ಮ‌ ಸರ್ಕಾರ ನುಡಿದಂತೆ ನೇಮಕಾತಿ ನಡೆಸುತ್ತಿದ್ದು, ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದೆ.‌ ಇಂಧನ ಇಲಾಖೆಯ ದಕ್ಷತೆ ಹೆಚ್ಚಿಸಲು ಮೂಲ ಸೌಕರ್ಯ ಹೆಚ್ಚಿಸುವುದರ ಜತೆಗೆ ಅಗತ್ಯ ಮಾನವ ಸಂಪನ್ಮೂಲ ವ್ಯವಸ್ಥೆ ಬಲಗೊಳಿಸಲಾಗುತ್ತಿದೆ. ಮುಂದೆಯೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು.

– ಕೆ.ಜೆ.ಜಾರ್ಜ್, ಇಂಧನ ಸಚಿವರು

ಕೆಪಿಟಿಸಿಎಲ್ ಆಧಾರಸ್ಥಂಭ ಕಿರಿಯ ಪವರ್ ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಪರಿಚಾರಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಇಂಧನ ಇಲಾಖೆಯ ಕಾರ್ಯಗಳಿಗೆ ವೇಗ ನೀಡಲು ಹುದ್ದೆ ಭರ್ತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು.

– ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ಕಿರಿಯ ಸ್ಟೇಷನ್‌ ಪರಿಚಾರಕರು ಹಾಗೂ ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಹಾಗೂ ತ್ವರಿತಗತಿಯಲ್ಲಿ ನಡೆದಿದೆ. ಎರಡು ದಿನಗಳ ಕೌನ್ಸೆಲಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಅದೇಶಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ಒದಗಿಸಲಾಗುವುದು”.

-ಪಂಕಜ್‌ ಕುಮಾರ್‌ ಪಾಂಡೆ, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್‌

 

ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ತಕ್ಷಣ ತೊಗರಿ ಖರೀದಿ ಕೇಂದ್ರ ಆರಂಭಿಸಿ: ರಾಜಕುಮಾರ ಪಾಟೀಲ್ ತೇಲ್ಕೂರ್ ಒತ್ತಾಯ

https://kannadanewsnow.com/kannada/cm-siddaramaiahs-meeting-with-various-farmer-organizations-in-belgaum-here-are-the-major-highlights/

Share. Facebook Twitter LinkedIn WhatsApp Email

Related Posts

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

2 Mins Read

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

1 Min Read

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

1 Min Read
Recent News

20 ವರ್ಷಗಳ ಬಳಿಕ ಮತ್ತೆ ಜಪಾನ್‌ನಿಂದ ಭಾರತೀಯ ಮಾವಿನ ಹಣ್ಣುಗಳ ಆಮದಿಗೆ ತಡೆ: ಕಾರಣವೇನು?

ಈದ್ ಬಲಿಪೀಠದಿಂದ ಪಾರಾದ ‘ಟ್ರಂಪ್’ ಎಮ್ಮೆ: ಇದೀಗ ಢಾಕಾ ಮೃಗಾಲಯದಲ್ಲಿ ಸಂರಕ್ಷಣೆ !

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್‌ಗೆ ಈದ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

‘ಇಸ್ರೇಲ್ ಜೊತೆ ಸಂಬಂಧ ಇಟ್ಟುಕೊಂಡರೆ ದೇಶವನ್ನೇ ನಾಶ ಮಾಡುತ್ತೇವೆ’: ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ LeT ಉಗ್ರ ಸಂಘಟನೆ!

State News
KARNATAKA

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

By ಗೋಪಾಲ್‌ ಎನ್‌ KARNATAKA 2 Mins Read

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28, 2026) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಉಪ…

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.