ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧಿಸಿದಂತೆ ವಿವಿಧ ಬಗೆಯ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯನ್ನು ಬೆಳಗಾವಿಮ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದೇವಸಂದ್ರದ ಮೊಹಮ್ಮದ್ ಅಜೀಮುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.
BIGG NEWS: ಚಿಕ್ಕಮಗಳೂರಿನಲ್ಲಿ ʼನಿಲ್ಲದʼ ಮಳೆಯ ಆರ್ಭಟ; ಮತ್ತೆ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಿಂಗ್ಪಿನ್ ಸಂಜು ಭಂಡಾರಿ ಹಾಗೂ ಬೆಳಗಾವಿಯ ಇತರರಿಗೆ ಡಿವೈಸ್ ಪೂರೈಕೆ ಮಾಡುತ್ತಿದ್ದನು.
ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಏಳು N-95 ಮಾಸ್ಕ್, 41 ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಬನಿಯನ್, 445 ಎಲೆಕ್ಟ್ರಾನಿಕ್ ಇಯರ್ ಪೀಸ್, 554 ವಿವಿಧ ಬಗೆಯ ಚಾರ್ಜಿಂಗ್ ಕೇಬಲ್, 6 ವಾಕಿಟಾಕಿ ಜಪ್ತಿ ಮಾಡಲಾಗಿದೆ. ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಪ್ರಮುಖ ಆರೋಪಿಯ ಬಂಧನವಾಗಿದೆ.
BIGG NEWS: ಚಿಕ್ಕಮಗಳೂರಿನಲ್ಲಿ ʼನಿಲ್ಲದʼ ಮಳೆಯ ಆರ್ಭಟ; ಮತ್ತೆ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ
ಇನ್ನು ಅಕ್ರಮವಾಗಿ ಎಲೆಕ್ಟ್ರಾನಿಕ್ ಸೂಕ್ಷ್ಮ ಉಪಕರಣ ಖರೀದಿಸುತ್ತಿದ್ದ. ದೆಹಲಿ, ಹೈದರಾಬಾದ್ನ ಡೀಲರ್ಗಳಿಂದ ಅಕ್ರಮವಾಗಿ ಉಪಕರಣಗಳ ಖರೀದಿ ಮಾಡಲಾಗುತ್ತಿತ್ತು. ಮಹಮ್ಮದ್ ಅಜೀಮುದ್ದೀನ್ ಬಳಿ ಸಂಜು ಭಂಡಾರಿ ಇಲೆಕ್ಟ್ರಾನಿಕ್ ಉಪಕರಣ ಖರೀದಿಸುತ್ತಿದ್ದ. ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್, ಸ್ಮಾರ್ಟ್ ವಾಚ್ ಪೂರೈಸುತ್ತಿದ್ದ. ಈ ಆಧಾರದ ಮೇಲೆ ಪೊಲೀಸರು ಇತನನ್ನು ಬಂಧಿಸಿದ್ದಾರೆ.