ಬೆಂಗಳೂರು: ಕೆಪಿಎಸ್ ಸಿಯಲ್ಲಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದೆ. ಈ ಆಯ್ಕೆ ಪಟ್ಟಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಕೆಪಿಎಸ್ಸಿ ಅಧಿಕಾರಿಯಿಂದ ದೂರು ನೀಡಲಾಗಿದೆ. ಈ ದೂರು ಆಧರಿಸಿ, ಪೊಲೀಸರು ಎಫ್ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ.
2016ರಲ್ಲಿ ನಡೆದ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿಗೆ ಸಂಬಂಧಿಸಿದಂತೆ 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅಭ್ಯರ್ಥಿಗಳು ಹೋಗಿದ್ದರು. ಹೈಕೋರ್ಟ್ ಆದೇಶದಂತೆ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿತ್ತು. ಕೆಪಿಎಸ್ಸಿ ಗೌಪ್ಯ ಶಾಖೆ-3ರಲ್ಲಿ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿತ್ತು.
ಜನವರಿ.22ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಗಿತ್ತು. ಆ ಬಳಿಕ ಆ ಕಡತವೇ ನಾಪತ್ತೆಯಾಗಿದೆ ಎಂಬುದಾಗಿ ಇಂದು ಕೆಪಿಎಸ್ಸಿ ಅಧಿಕಾರಿಯಿಂದ ದೂರು ನೀಡಲಾಗಿದೆ.
ಕೆಪಿಎಸ್ಸಿ ಎಲ್ಲಾ ಶಾಖೆಯಲ್ಲೂ ಹುಡುಕಾಡಿದರೂ ಕಡತ ಪತ್ತೆಯಾಗಿಲ್ಲ. ಕಡತ ಪತ್ತೆಯಾದ್ರೆ ಶಾಖೆ-2ಕ್ಕೆ ಹಿಂದಿರುಗಿಸುವಂತೆ ಜ್ಞಾಪನ ಹೊರಡಿಸಿದ್ದಂತ ಕೆಪಿಎಸ್ಸಿಗೆ ಈವರೆಗೆ ಕಡತ ಸಿಕ್ಕಿರಲಿಲ್ಲ. ಸುಮಾರು ಒಂದು ತಿಂಗಳು ಶೋಧ ನಡೆಸಿದಂತ ಅಧಿಕಾರಿ, ಸಿಬ್ಬಂದಿಗಳಿಗೆ ಕಡತ ಸಿಗದ ಕಾರಣ, ನಾಪತ್ತೆಯಾಗಿರುವಂತ ಆಯ್ಕೆಪಟ್ಟಿಯ ಕಡತದ ಬಗ್ಗೆ ದೂರು ನೀಡಲು ಆಯೋಗದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಅದರಂತೆ ಕಡತ ನಾಪತ್ತೆ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ಕೆಪಿಎಸ್ ಸಿ ಸಹಾಯಕ ಕಾರ್ಯದರ್ಶಿಯಿಂದ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
KPSCಯಲ್ಲಿ ಕಡತ ನಾಪತ್ತೆ ಕೇಸ್ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಮಾತನಾಡಿ ಕಡತ ನಾಪತ್ತೆ ಬಗ್ಗೆ ಕೆಪಿಎಸ್ ಸಿ ಕಾರ್ಯದರ್ಶಿ ದೂರು ಕೊಟ್ಟಿದ್ದಾರೆ. ಆಯೋಗದಲ್ಲಿ ಕಡತ ನಾಪತ್ತೆಯಾಗಿತ್ತು. 2016ರಲ್ಲಿ ಕೊಳಗೇರಿ ಮಂಡಳಿಯ JE ಸಿವಿಲ್ ನೇಮಕಾತಿ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಆಗಿತ್ತು. ಇದನ್ನ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಆದೇಶ ಪಾಲನೆ ಹಿನ್ನೆಲೆ ಮುಂದಿನ ಕ್ರಮಕ್ಕೆ ಕಾರ್ಯದರ್ಶಿ ಕಚೇರಿಯಲ್ಲಿ ಕಡತ ಸ್ವೀಕಾರಗೊಂಡಿತ್ತು. ಆದರೆ ಆ ಕಡತ ನಾಪತ್ತೆಯಾಗಿದೆ ಎಂದರು.
ಎಲ್ಲಾ ಶಾಖೆಗಳಲ್ಲಿ ಹುಡುಕಿ ದೃಡಿಕರಣ ಪತ್ರ ಕೊಡಬೇಕೆಂದು ಹೇಳಿದ್ದರು. ಆದರೆ ಯಾವ ಶಾಖೆಯಲ್ಲೂ ಕಡತ ಸಿಗಲಿಲ್ಲ. ಸಭೆಯಲ್ಲಿ ಪ್ರಕರಣ ದಾಖಲಿಸಲು ತೀರ್ಮಾನವಾಗಿತ್ತು. ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಸಸ್ಪೆಕ್ಟ್ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ನಾವು ಎಲ್ಲಾ ಮಾಹಿತಿ ಕೇಳಿದ್ದೇವೆ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ವಿದ್ಯುತ್ ಬರ ಇಲ್ಲ, ಸಮರ್ಪಕ ಪೂರೈಕೆಗೆ ಸಜ್ಜು: ಇಂಧನ ಸಚಿವ ಜಾರ್ಜ್
BREAKING: ಏ.3ರಂದು ‘ಮಂಡ್ಯ’ದಲ್ಲೇ ಸಭೆ ಮಾಡಿ ‘ನನ್ನ ನಿರ್ಧಾರ’ ಪ್ರಕಟ – ಸುಮಲತಾ ಅಂಬರೀಶ್