ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಅರಣ್ಯ ಸಚಿವ ಉಮೇಶ್ ಕತ್ತಿ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
BIGG NEWS: ಬೆಳಗಾವಿಯ ಕ್ಯಾಂಪ್ ಬಳಿ ಮನೆಯಲ್ಲಿ ಹೆಂಡತಿ&ಮಕ್ಕಳು ಮಲಗಿದ್ದಾಗಲೇ ನಡೆಯಿತು ವ್ಯಕ್ತಿಯ ಬರ್ಬರ ಹತ್ಯೆ
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಹೋದರ ರಮೇಶ್ ಕತ್ತಿ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಉಮೇಶ್ ಕತ್ತಿ ಜೊತೆಗಿನ ಒಡನಾಟ ಹಾಗೂ ಅವರ ನೇರ ವ್ಯಕ್ತಿತ್ವದ ಕುರಿತು ನೆನಪಿಸಿಕೊಂಡರು.
BIGG NEWS: ಬೆಳಗಾವಿಯ ಕ್ಯಾಂಪ್ ಬಳಿ ಮನೆಯಲ್ಲಿ ಹೆಂಡತಿ&ಮಕ್ಕಳು ಮಲಗಿದ್ದಾಗಲೇ ನಡೆಯಿತು ವ್ಯಕ್ತಿಯ ಬರ್ಬರ ಹತ್ಯೆ
ಉಮೇಶ್ ಕತ್ತಿ ಒಬ್ಬ ಸರಳ ವ್ಯಕ್ತಿತ್ವದ ಮನುಷ್ಯ.ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವರು ಯಾವತ್ತೂ ಬದಲಾಗಲಿಲ್ಲ.ಯಾವುದೇ ಸಂಕಷ್ಟದ ಪರಿಸ್ಥಿತಿ ಬಂದರೂ, ಹಾಸ್ಯದ ಮೂಲಕ ಅದನ್ನು ತಿಳಿಗೊಳಿಸುವ ಶಕ್ತಿ ಇವರಿಗಿತ್ತು. ಉತ್ತರ ಕರ್ನಾಟಕದ ಗಟ್ಟಿ ಧ್ವನಿ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನೋವಿನ ಸಂಗತಿ ಬೇಸರ ವ್ಯಕ್ತಪಡಿಸಿದರು.