ರಾಮನಗರ : ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಅಡಿಗೆ ಶಿವಕುಮಾರ್ ಅವರು ನೂರಕ್ಕೆ ನೂರರಷ್ಟು ಮುಖ್ಯಮಂತ್ರಿಯಾಗಿ ಆಗುತ್ತಾರೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಎಂಎಲ್ಸಿ ಪುಟ್ಟಣ್ಣ ಭವಿಷ್ಯ ನುಡಿದಿದ್ದಾರೆ.
ರಾಮನಗರದಲ್ಲಿ ಎಂಎಲ್ಸಿ ಪುಟ್ಟಣ್ಣ ಹೇಳಿಕೆ ನೀಡಿದ್ದು, ಯಾರನ್ನೋ ಮಾಡಿದ್ದೇವೆ ಅಂತೇ, ನಮ್ಮ ಮನೆ ಮಗ, ನಮ್ಮೂರವರು ಮುಖ್ಯಮಂತ್ರಿ ಆಗಲಿ ಬಿಡಿ. ಹಿತ್ತಲ ಬಾಗಿಲಲ್ಲಿ ಕೆಲವರು ಸಿಎಂ ಆಗಿದ್ದಾರೆ.ಎಚ್ ಡಿ ದೇವೇಗೌಡರದ್ದು ಹಾಗೂ ಸಿದ್ದರಾಮಯ್ಯ ಅವರದೆಲ್ಲಾ ಹೋರಾಟ. ಅವರನ್ನು ಬೇರೆಯವರಿಗೆ ಏಕೆ ಹೋಲಿಸುತ್ತೀರೆಂದು ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಗ್ಯಾರೆಂಟಿ ಯೋಜನೆಯ ಅಂಡರ್ ಕರೆಂಟ್ ಇದು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 23 ರಿಂದ 25 ಸ್ಥಾನ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದರು ಅಲ್ಲದೆ ಫಲಿತಾಂಶದ ಬಳಿಕ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಯುವ ವಿಚಾರವಾಗಿ ಮಾತನಾಡಿದ ಅವರು, ಅದು ಗೊತ್ತಿಲ್ಲ ಯಾರನ್ನು ಇಟ್ಕೋತಾರೋ ಕಟ್ಕೋತಾರೋ ಗೊತ್ತಿಲ್ಲ. ಇನ್ನು 9 ವರ್ಷ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮುಂದುವರೆಯಲಿದೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದ ಎಂಎಲ್ಸಿ ಪುಟ್ಟಣ್ಣ ಹೇಳಿಕೆ ನೀಡಿದರು.