ಕೊಪ್ಪಳ : ಕೊಪ್ಪಳದಲ್ಲಿ ಜಮೀನು ವಿಚಾರಕ್ಕೆ ವೃದ್ದೆಗೆ ರಕ್ತ ಬರುವಂತೆ ಹಲ್ಲೆ ನಡೆಸಲಾಗಿದೆ. ಇಬ್ಬರು ಯುವಕರು ವೃದ್ದೆ ರತ್ನಮ್ಮ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಾರೆ. ಚಂದ್ರಪ್ಪ ಮತ್ತು ಉಡಚನ್ನಪ್ಪ ಎಂಬ ಯುವಕರು ವೃದ್ದೆ ರತ್ನಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕೊಪ್ಪಳ ತಾಲೂಕಿನ ತಿಗರಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರತ್ನಮ್ಮಗೆ ಸೇರಿದ ಜಮೀನಿನ ಪಕ್ಕ ಚಂದ್ರಪ್ಪ ಅವರ ಜಾಮೀನು ಇರುತ್ತೆ ಜಮೀನು ಒತ್ತುವರಿ ಆಗಿದೆ ಎಂದು ಮಾತಿನ ಚಕಮಕಿ ನಡೆಯುತ್ತದೆ. ಈ ಸಂದರ್ಭ ವೃದ್ದೆ ರತ್ನಮ್ಮ ಮೇಲೆ ಬಾಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ನಡೆಸಲಾಗಿದೆ. ಆಗ ರತ್ನಮ್ಮ ನಿಮ್ಮ ವಿರುದ್ಧ ದೂರು ಕೊಡುತ್ತೇನೆ ಅಂದಾಗ ಪೊಲೀಸ್ ಠಾಣೆ ನಮ್ಮದೇ ಇದೆ ಅಂತ ದಮ್ಕಿ ಬೇರೆ ಹಾಕಿದ್ದಾರೆ.