ಕೊಪ್ಪಳ: ಜಿಲ್ಲೆಯ ಹುಲಿಹೈದರ್ ಗುಂಪು ಘರ್ಷಣೆ ಘಟನೆ ವೇಳೆ ಗ್ರಾಮ ತೊರಿದಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
BIGG NEWS: ಮುರುಘಾಶ್ರೀಗಳ ಅಕ್ಷಮ್ಯ ಅಪರಾಧ: ತಕ್ಕ ಶಿಕ್ಷೆಯಾಗಬೇಕು; ಬಿ.ಎಸ್.ಯಡಿಯೂರಪ್ಪ
ಕಳೆದ 3 ತಿಂಗಳಿನಿಂದ ನಾಗರಾಜ ಹನುಮಂತಪ್ಪ ಎಂಬ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದ. ಆದ್ರೆ ಈಗ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ದೇಹ ಪತ್ತೆಯಾಗಿದೆ.
ಹುಲಿಹೈದರ್ ಗಲಾಟೆಯಲ್ಲಿ ಮೃತನ ತಂದೆ ಮತ್ತು ಅಣ್ಣನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಳೆದ 3 ತಿಂಗಳಿನಿಂದ ಮೃತ ಯುವಕನ ಅಣ್ಣ ಗೋಸಲಪ್ಪ ಜೈಲಿನಲ್ಲಿದ್ದಾರೆ. ತನ್ನ ಮೇಲೂ ಪ್ರಕರಣ ದಾಖಲಾಗಿ ಜೈಲಿಗೆ ಕಳಿಸುವ ಭೀತಿಯಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ.
BIGG NEWS: ಮುರುಘಾಶ್ರೀಗಳ ಅಕ್ಷಮ್ಯ ಅಪರಾಧ: ತಕ್ಕ ಶಿಕ್ಷೆಯಾಗಬೇಕು; ಬಿ.ಎಸ್.ಯಡಿಯೂರಪ್ಪ
ಘಟನೆ ಹಿನ್ನೆಲೆ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಅನ್ಯಕೋಮಿನ ನಡುವೆ ಗುಂಪು ಘರ್ಷಣೆ ನಡೆದಿತ್ತು. ಸಂಘರ್ಷಣೆಯಲ್ಲಿ ಯಂಕಪ್ಪ ತಳವಾರ , ಭಾಷಾಸಾಬ್ ಎಂಬವರು ಸಾವನ್ನಪ್ಪಿದ್ದರು. ಹಾಗೂ ಹಲವರಿಗೆ ಗಾಯಗಳಾಗಿದ್ದವು. ನಂತರ ಘರ್ಷಣೆಯಲ್ಲಿ ಭಾಗಿಯಾಗಿದ್ದ ಅನೇಕರು ಬೇರೆ ಬೇರೆ ಜಿಲ್ಲೆಗಳಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ಗುಂಪು ಘರ್ಷಣೆ ಸಂಬಂಧ ಅನೇಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು.