ಕೊಪ್ಪಳ : ಪತ್ನಿಯ ಶೀಲವನ್ನು ಶಂಕಿಸಿದ ಪತಿ ಆಕೆಯ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿ, ಭೀಕರವಾಗಿ ಕೊಂದು ನಂತರ ಅವಸರದಲ್ಲಿ ಮೃತದೇಹವನ್ನು ಸುಟ್ಟು ಅಂತ್ಯಕ್ರಿಯೆ ನಡೆಸಿರುವ ಘಟನೆ, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನ ಮಹಿಳೆ ಗೀತಾ (27) ಅವರನ್ನು ಪತಿ ದೇವರೆಡ್ಡೆಪ್ಪ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ ಕೊಲೆಗೈದಿದ್ದಾನೆ.ಪತ್ನಿಯ ಶೀಲದ ಬಗ್ಗೆ ಶಂಕಿಸಿ, ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ, ಅವಳನ್ನು ಸೆ. 7ಕ್ಕೆ ತಡರಾತ್ರಿ ಸುಮಾರಿಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ.
ಬಳಿಕ ಕುಟುಂಬದೊಂದಿಗೆ ಸೇರಿಕೊಂಡು ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು, ಮೃತಳ ತಂದೆ-ತಾಯಿಗೆ ಸುಳ್ಳು ಹೇಳಿ, ಮೃತದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟಿದ್ದಾನೆ ಎನ್ನಲಾಗಿದೆ.ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಮೃತಳ ಸಹೋದರ ಸಿದ್ದಾರೆಡ್ಡಿ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸದ್ಯ ಕೊಲೆ ಆರೋಪಿ ಹಾಗೂ ಆತನ ತಂದೆಯನ್ನ ಅರೆಸ್ಟ್ ಮಾಡಲಾಗಿದೆ.