ಕೊಪ್ಪಳ : ಜಿಲ್ಲೆಯ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತರ ಆಗಮನ ಹಿನ್ನಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.
ಜನವರಿ 8, 9 ಮತ್ತು 10ರಂದು ಗವಿಸಿದ್ದೇಶ್ವರ ಜಾತ್ರೆ ನಡೆಯಲಿದ್ದು, ನಾನಾ ಜಿಲ್ಲೆಗಳಿಂದ ಭಕ್ತ ಆಗಮನ ಹೆಚ್ಚಾಗುವ ಹಿನ್ನೆಲೆ ಹೆಚ್ಚುವರಿ ಬಸ್ ಓಡಾಟ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಬಸ್ಗಳು ಗದಗ, ಯಲಬುರ್ಗಾ, ಕುಕನೂರ ಕಡೆಗೆ ಮತ್ತು ಅಳವಂಡಿ, ಮುಂಡರಗಿ ಕಡೆಗೆ ಕೊಪ್ಪಳ ಕೇಂದ್ರೀಯ ಬಸ್ನಿಲ್ದಾಣದಿಂದ ಹೊರಡಲಿವೆ.
ಹೊಸಪೇಟೆ, ಗಂಗಾವತಿ ಮಾರ್ಗಗಳಿಗೆ ನಗರದ ಹೊಸಪೇಟೆ ರಸ್ತೆಯ ಮಾತಾ ಹೋಟೆಲ್ ಹತ್ತಿರ ಬಸ್ ಹೊರಡುವ ವ್ಯವಸ್ಥೆ ಮಾಡಲಾಗಿದೆ.
ಕುಷ್ಟಗಿ ಮಾರ್ಗಕ್ಕೆ ನಗರದ ಕಾಳಿದಾಸ ನಗರದ ಹತ್ತಿರದಲ್ಲಿ ಬಸ್ ಹೊರಡಲಿದೆ. ಅಲ್ಲದೇ ಹ್ಯಾಟಿ, ಗೊಂಡಬಾಳ, ಕರ್ಕಿಹಳ್ಳಿ ಕಡೆಗೆ ಹೋಗುವ ಮಾರ್ಗಗಳಿಗೆ ನಗರದ ಗಡಿಯಾರ ಕಂಬದ ಹತ್ತಿರದಲ್ಲಿ ವ್ಯವಸ್ಥೆ ಇದೆ. ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಈ ಹಿಂದೆಯೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗಕ್ಕೆ ಹೆಚ್ಚುವರಿ ಬಸ್ ಒದಗಿಸುವಂತೆ ಮನವಿ ನೀಡಲಾಗಿತ್ತು.