ಕೊಪ್ಪಳ: ಪಿಎಸ್ ಐ ನೇಮಕಾತಿ ಹಗರಣದಲ್ಲಿ ಆಡಿಯೋ ವೈರಲ್ ಸೇರಿದಂತೆ ಇನ್ನಿತರ ವಿಚಾರಗಳಿಂದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೆಸಗೂರು ಮೇಲೆ ಪಕ್ಷದ ಮುಖಂಡರ ನಡುವೆ ವೈ ಮನಸ್ಸು ಶುರುವಾಗಿದೆ.
BIGG NEWS: ವಾಹನ ಸವಾರರಿಗೆ ದೀಪಾವಳಿ ಗಿಫ್ಟ್; ರಾಜ್ಯದಲ್ಲಿ ಏಳು ದಿನ ಟ್ರಾಫಿಕ್ ನಿಯಮ ಉಲ್ಲಂಘಿದ್ರೆ ಇಲ್ಲ ದಂಡ
ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಪಕ್ಷದ ನಾಯಕರಲ್ಲಿ ಒತ್ತಡ ಹೇರಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಭೆ ಸೇರಿದ ಪಕ್ಷದ ಮುಖಂಡರು, ಶಾಸಕರ ದುರ್ವರ್ತನೆ, ಪಿಎಸ್ಐ ಹಗರಣದ ಆಡಿಯೋ ಕೇಸ್, ಮಹಿಳಾ ಅಧಿಕಾರಿ ಜೊತೆಗಿನ ಗಲಾಟೆ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ. ಶಾಸಕರ ಈ ಎಲ್ಲಾ ನಡತೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ದಡೇಸಗೂರುಗೆ ಟಿಕೆಟ್ ನಿಡದಂತೆ ಹಾಗೂ ಹೊಸ ಮುಖವನ್ನು ಕಣಕ್ಕಿಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲು ನಿರ್ಧರಿಸಲಾಗಿದೆ.