ಕೋಲಾರ : ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿ ಬಳಿಯ ಸಂಜೀವಿನಿ ಸ್ಟೋನ್ ಕ್ರಶರ್ಸ್ ಕಲ್ಲು ಕ್ವಾರಿಯಲ್ಲಿ ಸ್ಪೋಟ ಪ್ರಕರಣ ಸಂಬಂಧ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಗಣಿಗಾರಿಕೆ ವೇಳೆ ಜಿಲಿಟನ್ ಸ್ಟೋಟಗೊಂಡು ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದ ಪ್ರಕರಣ ಸದ್ಯ ಸಿಐಡಿಗೆ ವರ್ಗಾವಣೆಯಾಗಿದೆ.
ಇನ್ನು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಮಾಡಬೇಕೆಂದು ಆಗ್ರಹಿಸಿ ಸಚಿವ ಮುನಿರತ್ನ ಅವರ ಕಾರಿಗೆ ಅಡ್ಡಹಾಕಿ ಕೆಲವು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಕಾರಣ ಸ್ಥಳೀಯವಾಗಿ ಶಾಸಕ ನಂಜೇಗೌಡರು ತಮ್ಮ ಪ್ರಭಾವ ಬಳಿಸಿ ಪ್ರಕರಣವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈಗಾಗಲೇ ಸ್ಪೋಟ ನಡೆದ ದಿನದಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಕಲ್ಲುಕ್ವಾರಿಯಲ್ಲಿ ನಡೆದ ಸ್ಟೋಟ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಎಲ್ಲದಕ್ಕೂ ಮುಖ್ಯವಾಗಿ ಈ ಪ್ರಕರಣದಲ್ಲಿ ಮಾಲೂರು ಶಾಸಕ ಕೆ ವೈ ನಂಜೇಗೌಡ ಅವರ ಕುಟುಂಬದ ಪಾತ್ರವಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದು, ಶಾಸಕ ನಂಜೇಗೌಡರಿಗೆ ಸಂಕಷ್ಟ ಎದುರಾಗಿದೆ.
ಕೋಲಾರದ ಕಲ್ಲುಕ್ವಾರಿಯಲ್ಲಿ ಸ್ಫೋಟ ಪ್ರಕರಣ ತಿರುವು ಕಂಡಿದ್ದು ಲಾರಿ ಹರಿದು ಸಾವು ಎಂಬುದು ಸುಳ್ಳು ಎಂದು ಹಲವರು ಆರೋಪಿಸಿದ್ದರು. ಕ್ವಾರಿಯಲ್ಲಿ ಸ್ಪೋಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ಕ್ವಾರಿ ಮಾಲೀಕ ಮಂಜುನಾಥ್, ಡೀಲರ್ ಮಾಡಿದ್ದ ಸುರೇಶ್, ಡ್ರೈವರ್ ಅಂಜಿ, ಸುಳ್ಳು ದೂರು ನೀಡಿದ್ದ ನಿತೀಶ್, ಸ್ಪೋಟದ ಪರವಾನಗಿ ಹೊಂದಿದ ದೀಪಕ್ ಸೇರಿ 8 ಜನರನ್ನ ಬಂಧಿಸಲಾಗಿದೆ.ಪ್ರಕರಣವನ್ನು ಅಪಘಾತವೆಂದ ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿತ್ತು. ಪ್ರಕರಣ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಮಾಜಿ ಶಾಸಕ ಮಂಜುನಾಥ್ ಗೌಡ ಸೇರಿ ಹಲವರು ಮನವಿ ಮಾಡಿದ್ದರು.