ಕೊಲ್ಲೂರು: ಕೊಲ್ಲೂರು- ಕೊಡಚಾದ್ರಿ ನಡುವಿನ ಕೇಂದ್ರ ಸರ್ಕಾರ ರೋಪ್-ವೇ ಯೋಜನೆಗೆ ಒಪ್ಪಿಗೆ ನೀಡಿದೆ. 2022-23ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಪರ್ವತಮಾಲಾ ಯೋಜನೆಯಡಿ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಲಾಗುತ್ತದೆ. ಯೋಜನೆಯ ಪ್ರಾಥಮಿಕ ಕಾರ್ಯಗಳು ಆರಂಭವಾಗಿವೆ.
BIGG NEWS: ಮತದಾರ ಮಾಹಿತಿ ಹಗರಣ: ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಿರುವ ಕಾಂಗ್ರೆಸ್ ನಾಯಕರು
ಕೇಂದ್ರದ ಭೂ ಸಾರಿಗೆ ಮಂತ್ರಾಲಯದ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿಯ ಸರ್ವಜ್ಞ ಪೀಠದಿಂದ-ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ತನಕ ಕೇಬಲ್ ಕಾರ್ ಅಳವಡಿಸುವ ಕಾಮಗಾರಿ ಕುರಿತು ಸ್ಥಳ ಪರಿಶೀಲನೆ ನಡೆಸುತ್ತಿದೆ.ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡವು ಡಿಪಿಆರ್ ಮತ್ತು ಪತನ ನಕ್ಷೆಯನ್ನು ಅಂತಿಮಗೊಳಿಸಲು ಹಾಗೂ ಡಿಪಿಆರ್ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನದ ಸಮೀಕ್ಷೆ ಮತ್ತು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.