ಕೊಲ್ಕತ್ತಾ: ಸಾಂಕ್ರಾಮಿಕ ರೋಗದಿಂದಾಗಿ ”ಮನೆಯಿಂದ ಕೆಲಸ(work from home) ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿದೆ. ಜನರು ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತಿರುತ್ತಾರೆ. ಆದ್ರೆ, ಇಲ್ಲೊಂದು ವೈರಲ್ ಆಗಿರುವ ಫೋಟೋದಲ್ಲಿ ವರ ತನ್ನ ಮದುವೆ ಕಾರ್ಯಕ್ಕಿಂತ ಆಫೀಸ್ ಕೆಲಸವೇ ಮುಖ್ಯವೆಂದು ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡುತ್ತಿರುವುದನ್ನು ನೋಡಬಹುದು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ವರ ಮಂಟಪದಲ್ಲಿ ಕುಳಿತು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವುದನ್ನು ತೋರಿಸುತ್ತದೆ, ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಹ ಮರೆತುಬಿಟ್ಟಿದ್ದಾನೆ ಎಂಬುದನ್ನು ನೋಡಬಹುದು.
View this post on Instagram
ಈ ಫೋಟೋವನ್ನು ‘ಕಲ್ಕತ್ತಾ ಇನ್ಸ್ಟಾಗ್ರಾಮರ್ಸ್’ ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. ಇದು ಕೋಲ್ಕತ್ತಾದ ವರನನ್ನು ಇಬ್ಬರು ಪುರೋಹಿತರ ಜೊತೆಗೆ ಮಂಟಪದಲ್ಲಿ ಕುಳಿತಿರುವುದನ್ನು ತೋರಿಸುತ್ತದೆ. ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಂತೆ ಅವರು ಲ್ಯಾಪ್ಟಾಪ್ನಲ್ಲಿ ತಮ್ಮ ಕೆಲಸದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ವರ ಲ್ಯಾಪ್ಟಾಪ್ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ಕೆಲವು ಅಧಿಕೃತ ಕೆಲಸ ಎಂದು ಭಾವಿಸಲಾಗಿದೆ.
BIGG NEWS : ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಷಷ್ಟಿ ಸಂಭ್ರಮ’ : ನಾಗ ದೇವರ ದರ್ಶನ ಪಡೆದು ಪುನೀತರಾದ ಭಕ್ತರು
OMG! 58 ಗಂಟೆಗಳ ಕಾಲ ʻಲಿಪ್ ಟು ಲಿಪ್ ಕಿಸ್ʼ ಮಾಡಿ ಗಿನ್ನೆಸ್ ಬರೆದ ದಂಪತಿ!
BIG NEWS: ‘ಸೈಲೆಂಟ್ ಸುನಿಲ್’ ‘ಬಿಜೆಪಿ ಸೇರ್ಪಡೆ’ ಅವಕಾಶವಿಲ್ಲ – ನಳಿನ್ಕುಮಾರ್ ಕಟೀಲ್
BIGG NEWS : ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಷಷ್ಟಿ ಸಂಭ್ರಮ’ : ನಾಗ ದೇವರ ದರ್ಶನ ಪಡೆದು ಪುನೀತರಾದ ಭಕ್ತರು