ನವದೆಹಲಿ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾದ ಆರ್ ಜಿ ಕಾರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಇಂದು ಸಿಯಾಲ್ಡಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಸಂಜಯ್ ರಾಯ್ ಅವರು 9 ಆಗಸ್ಟ್ 2024 ರಂದು ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ್ದು, ಇದೀಗ ಅಪರಾಧಿ ಸಂಜಯ್ ರಾಯ್ ಗೆ ಶಿಕ್ಷೆ ವಿಧಿಸಿ ಸಿಯಾಲ್ಡಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಆರ್ ಜಿ ಕರ್ ಪ್ರಕರಣವು ಪಶ್ಚಿಮ ಬಂಗಾಳವನ್ನು ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇಂದು ಈ ಪ್ರಕರಣದ ಅಪರಾಧಿಗೆ ಶಿಕ್ಷೆ ಪ್ರಕಟಿಸಲಾಗಿದೆ.
ಆಗಸ್ಟ್ 9, 2024 ರಂದು, 36 ಗಂಟೆಗಳ ಪಾಳಿಯ ನಂತರ ವಿಶ್ರಾಂತಿ ಪಡೆಯಲು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಮಲಗಿದ್ದ ಯುವ ತರಬೇತಿ ವೈದ್ಯೆ ಅಭಯ, ಕ್ರೂರರ ಕ್ರೌರ್ಯಕ್ಕೆ ಬಲಿಯಾದರು ಎಂಬುದು ಉಲ್ಲೇಖನೀಯ. ಅಂದಿನಿಂದ, ಅಭಯಾಳ ಹತ್ಯೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ ಮತ್ತು ಜನರು ನ್ಯಾಯಕ್ಕಾಗಿ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಘಟನೆ ಹಿನ್ನೆಲೆ
2024ರ ಆಗಸ್ಟ್ 8-9ರ ಮಧ್ಯರಾತ್ರಿಯ ಸಮಯದಲ್ಲಿ ಟ್ರೇನಿ ವೈದ್ಯೆಯ ಮೇಲೆ ರೇಪ್ & ಮರ್ಡರ್ ಆಗಿತ್ತು. ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ಈ ಘಟನೆಗೆ ದೇಶವ್ಯಾಪಿ ಅಕ್ರೋಶ ವ್ಯಕ್ತವಾಗಿತ್ತು. ಆಗಸ್ಟ್ 9 ರ ಮಧ್ಯರಾತ್ರಿ ವೈದ್ಯೆಯ ಶವ ಸೆಮಿನಾರ್ ಹಾಲ್ನಲ್ಲಿ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ನನ್ನು ಆಗಸ್ಟ್ 10 ರಂದು ಬಂಧನ ಮಾಡಿತ್ತು.
Kolkata, West Bengal: Sealdah court begins hearing RG Kar rape-murder case
The court will pronounce the quantum of sentence in RG Kar rape-murder case today after the court found Sanjay Roy guilty in the rape and murder case on January 18. pic.twitter.com/KUyMIEDm0a
— ANI (@ANI) January 20, 2025
ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಾಲಯವು ಇಂದು ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಮಹತ್ವದ ತೀರ್ಪು ನೀಡಿದೆ.
Donald Trump Oath: 35 ಪದಗಳ ಪ್ರಮಾಣ ವಚನ, 700 ಅತಿಥಿಗಳು: ಡೊನಾಲ್ಡ್ ಟ್ರಂಪ್ ಪದಗ್ರಹಣದ ವಿಶೇಷತೆ ಇಲ್ಲಿದೆ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್