ಕೋಲಾರ : ರಾಜ್ಯದಲ್ಲಿ ಭಾರಿ ಮಳೆ ಮುಂದುವರೆದಿದ್ದು ಇದೀಗ ಕೋಲಾರದಲ್ಲಿ ಸುರಿದ ಅಪಾರ ಪ್ರಮಾಣದ ಮಳೆಯಿಂದ ಕೋಲಾರದ ಅರಹಳ್ಳಿ ರೈಲ್ವೇ ಅಂಡರ್ ಪಾಸ್, ಈ ವೇಳೆ ಕಾರದ್ದು ನೀರಿನಲ್ಲಿ ಸಿಲುಕಿ ಕಾರ್ಮಿ ಚಾಲಕ ಪರದಾಟ ನಡೆಸುವ ಘಟನೆ ನಡೆದಿದೆ.
ಹೌದು ಭಾರೀ ಮಳೆಗೆ ಕೋಲಾರದ ಅರಹಳ್ಳಿ ರೈಲ್ವೇ ಅಂಡರ್ ಪಾಸ್ ತುಂಬಿಕೊಂಡಿದ್ದು, ಬಸ್, ಕಾರು ಸೇರಿದಂತೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಅಂಡರ್ ಪಾಸ್ನಲ್ಲಿ ಮಳೆಯಿಂದಾಗಿ ಸಂಪೂರ್ಣವಾಗಿ ನೀರು ತುಂಬಿ ಹರಿಯುತ್ತಿದೆ. ಕಳೆದ ಒಂದು ಗಂಟೆಯಿಂದ ಸುರಿದ ಮಳೆಗೆ ಕೋಲಾರ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಇದರಿಂದ ಹಲವೆಡೆ ಯುಜಿಡಿ ತುಂಬಿ ಹರಿಯುತ್ತಿದೆ. ಇನ್ನು ದಿಢೀರ್ ಮಳೆಗೆ ವಾಹನ ಸವಾರರು ಕಂಗಾಲಾಗಿದ್ದಾರೆ.