ಬಾಗಲಕೋಟೆ : ಈಗಾಗಲೇ ರಾಜ್ಯ, ದೇಶ, ಪ್ರಪಂಚದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಂತ ಕೋಡಿಮಠದ ಸ್ವಾಮೀಜಿ, ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಅದೇ ಎರಡು ಮೂರು ಮಹಾನ್ ನಾಯಕರಿಗೆ ಅಪಮೃತ್ಯು ಎದುರಾಗಲಿದೆ. ದೆಹಲಿಗೂ ಆಪತ್ತು ಕಾದಿದೆ ಅಂತ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು. ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂಬುದಾಗಿ ಆಘಾತ ಕಾರಿ ಭವಿಷ್ಯ ನುಡಿದಿದ್ದಾರೆ.
ಇದಷ್ಟೇ ಅಲ್ಲದೇ ದೊಡ್ಡ ನಾಯಕರಿಗೂ ಸಾವು ಎದುರಾಗಲಿದೆ. ಎರಡು ಮೂರು ನಾಯಕರ ಅಪಮೃತ್ಯು ಆಗಲಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ ಎಂಬುದಾಗಿ ಹೇಳಿದ್ದಾರೆ.
🔥 ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ 🔥 👇