ಮಡಿಕೇರಿ :-220/66/11ಕೆವಿ, 66/11ಕೆವಿ ಮತ್ತು 33/11ಕೆ.ವಿ ಸ್ವೀಕರಣಾ ಕೇಂದ್ರದಿಂದ ನವೆಂಬರ್, 13 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಣೆ ಹಿನ್ನೆಲೆ ನವೆಂಬರ್, 13 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕುಶಾಲನಗರ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ಕುಶಾಲನಗರ ಪಟ್ಟಣ, ಗೊಂದಿಬಸವನಹಳ್ಳಿ, ಮುಳ್ಳುಸೋಗೆ, ನಂಜರಾಯಪಟ್ಟಣ, ಗುಡ್ಡೆಹೊಸೂರು, ಕೆದಕಲ್, ನಾಕೂರು, ಹೊಸಕೋಟೆ, ಮತ್ತಿಕಾಡು, ಗರ್ಗಂದೂರು, ಮಾದಾಪುರ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಕೂಡಿಗೆ, ಕೂಡುಮಂಗಳೂರು, ದೊಡ್ಡತ್ತೂರು, ಚಿಕ್ಕತ್ತೂರು, ಹೆಬ್ಬಾಲೆ, ತೊರೆನೂರು, ಸೋಮವಾರಪೇಟೆ ಟೌನ್, ಶಾಂತಳ್ಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಐಗೂರು, ಬಜೇಗುಂಡಿ, ದೊಡ್ಡಮಳ್ತೆ, ಮಸಗೋಡು, ಕರ್ಕಳ್ಳಿ, ಹಾನಗಲ್ಲು, ಬೇಳೂರು, ಯಡವಾರೆ, ಕುಂಬೂರು ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ರಾಜ್ಯದ SC, ST ಸಮುದಾಯದ ರೈತರ ಗಮನಕ್ಕೆ: ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ
BIG NEWS: ಭಾರತದಲ್ಲಿ ಇದೇ ಮೊದಲು: ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯ ಹೆಸರು ತಾಯಿ ಎಂದು ‘ಪಾಸ್ಪೋರ್ಟ್’ನಲ್ಲಿ ಉಲ್ಲೇಖ