ಕೊಡಗು : ಸಾಮಾನ್ಯವಾಗಿ ಚಿಕ್ಕ ಚಿಕ್ಕ ವಿಷಯಗಳಿಗೆ ಸಂಬಂಧಿಸಿದಂತೆ ಮದುವೆ ಮುರಿದು ಬಿದ್ದಿರುವುದನ್ನು ನಾವು ನೋಡಿದ್ದೇವೆ ಇದೀಗ ಅಂತಹದ್ದೇ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು ಸಿಹಿ ಅಡುಗೆ ಮಾಡಿಲ್ಲ ಎಂದು ಆರೋಪಿಸಿ ಇದೀಗ ವರನ ಕಡೆಯವರು ಮದುವೆ ಮುರಿದಿದ್ದಾರೆ.
ಹೌದು ಸಿಹಿ ಅಡುಗೆ ಮಾಡಿಲ್ಲ ಎಂದು ಮದುವೆ ಮುರಿದ ವರನ ಕಡೆಯವರು, ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಈ ಒಂದು ಘಟನೆ ನಡೆದಿದೆ. ಸೋಮವಾರಪೇಟೆಯ ಛತ್ರ ಒಂದರಲ್ಲಿ ಮದುವೆಯೊಂದು ನಿಗದಿಯಾಗಿತ್ತು. ಸೋಮವಾರಪೇಟೆಯ ಹಾನಗಲ್ ಗ್ರಾಮದ ಯುವತಿ ಹಾಗೂ ಕುಣಿಗಲ್ ಯುವಕನ ಜೊತೆಗೆ ವಿವಾಹ ನಿಶ್ಚಯವಾಗಿತ್ತು.
ಈ ವೇಳೆ ಅಡುಗೆಯಲ್ಲಿ ಸಿಹಿ ಮಾಡಿಲ್ಲ ಎಂದು ವರನ ಕಡೆಯವರು ತಗಾದೆ ತೆಗೆದಿದ್ದಾರೆ. ಇದೆ ಸಂದರ್ಭದಲ್ಲಿ ಮಧುಮಗ ಮತ್ತು ಮಧುಮಗಳು ಉಂಗುರವನ್ನು ಬಿಸಾಕಿದ್ದಾರೆ. ವಧು ಕಡೆ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಇದೀಗ ಸೋಮವಾರಪೇಟೆ ಠಾಣೆಯಲ್ಲಿ ವರನ ವಿರುದ್ಧ ಯುವತಿಯ ಕಡೆಯವರು ದೂರು ದಾಖಲಿಸಿದ್ದಾರೆ.