ಬೆಂಗಳೂರು: ರಾಜ್ಯದಲ್ಲಿ ನಡೆದಾಡುವ ಕಾಡಿನ ನಿಘಂಟು ಎಂಬುದಾಗಿಯೇ ಹೆಸರಾಗಿದ್ದಂತ ಕೊಡಗಿನ ಕೆ.ಎಂ ಚಿಣ್ಳಪ್ಪ(84) ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಇನ್ನಿಲ್ಲವಾಗಿದ್ದಾರೆ. ಅವರ ನಿಧಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಮಾಡಿರುವಂತ ಅವರು, ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು ಎಂದಿದ್ದಾರೆ.
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾದರಿ ಎಂದು ತಿಳಿಸಿದ್ದಾರೆ.
ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು.
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ… pic.twitter.com/80QDGfkCco
— R. Ashoka (ಆರ್. ಅಶೋಕ) (@RAshokaBJP) February 26, 2024
ಅನೇಕ ಸಲ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕಾಡು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡ ಚಿಣ್ಣಪ್ಪ ಅವರ ಹೆಸರು ಗಂಧದನಾಡಿನಲ್ಲಿ ಆದರ್ಶ ಪ್ರಾಯವಾಗಿರುತ್ತದೆ ಎಂದಿದ್ದಾರೆ.
ಅವರ ನಿಧನದಿಂದ ಅವರ ಕುಟುಂಬಕ್ಕೆ, ಪ್ರಕೃತಿ ಪ್ರಿಯರಿಗೆ ಹಾಗೂ ಅಭಿಮಾನಿಗಳಿಗೆ ಆಗಿರುವ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂಬುದಾಗಿ ತಿಳಿಸಿದ್ದಾರೆ.
ತೀರ್ಥ, ಪ್ರಸಾದ ಬೇಡ ‘ಬಸ್’ ಕೊಡಿ ಎಂದು ಸಿಎಂಗೆ ‘ವಿದ್ಯಾರ್ಥಿನಿ ಪತ್ರ’: ಈ ಸ್ಪಷ್ಟನೆ ಕೊಟ್ಟ ‘KSRTC’
ಜಪಾನ್‌ನ ‘SLIM ಮೂನ್ ಲ್ಯಾಂಡರ್’ 2 ವಾರಗಳ ಚಂದ್ರನ ರಾತ್ರಿಯ ನಂತರ ‘ಮತ್ತೆ ಜೀವಂತ: ವಿಜ್ಞಾನಿಗಳಿಗೆ ಅಚ್ಚರಿ