ತುಮಕೂರು : ವಿಧಾನಸಭೆ ಚುನಾವಣೆ ಸಮೀಪ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳ ಫೈಟ್ ಜೋರಾಗಿಯೇ ಇದೆ. ನನಗೆ ಟಿಕೆಟ್ ಬೇಕು..ನನಗೆ ಟಿಕೆಟ್ ಬೇಕು ಎಂದು ಆಕಾಂಕ್ಷಿಗಳ ನಡುವೆ ಫೈಟ್ ನಡೀತಲೇ ಇದೆ. ಇದರ ನಡುವೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ನನಗೆ ಟಿಕೆಟ್ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಕೆ.ಎಂ ಮುನಿಯಪ್ಪ ಈ ತರಹ ಹೇಳಿಕೆ ನೀಡಿದ್ದು, ಕೊರಟಗೆರೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಜನಸಂಕಲ್ಪ ಯಾತ್ರೆಗೆ ಜನಸ್ತೋಮವೇ ಹರಿದು ಬಂದಿದ್ದು ನನ್ನ ಪರಿಶ್ರಮದ ಪ್ರತಿಫಲ. ಯಾರಿಗೋ ಟಿಕೆಟ್ ಕೊಟ್ಟರೆ ಪಕ್ಷ ಗೆಲ್ಲಲ್ಲ, ನನಗೆ ಟಿಕೆಟ್ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತೆ, ಇಲ್ಲದಿದ್ರೆ ಸೋಲುತ್ತದೆ ಎಂದು ಹೇಳುವ ಮೂಲಕ ಮುನಿಯಪ್ಪ ಅಚ್ಚರಿ ಮೂಡಿಸಿದ್ದಾರೆ. ಮುನಿಯಪ್ಪಗೆ ಟಕೆಟ್ ಸಿಗುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ – ಸಿಎಂ ಬೊಮ್ಮಾಯಿ
Black Rice benefits:: ಕಪ್ಪು ಅಕ್ಕಿ ಬಗ್ಗೆ ನಿಗೆಷ್ಟು ಗೊತ್ತು ? ಇದರಲ್ಲಿವೆ ಹಲವು ಆರೋಗ್ಯ ಲಾಭಗಳು