ನವದೆಹಲಿ: ಕ್ಯಾನ್ಸರ್ನಿಂದ ಬಳಲುತ್ತಿದ್ದ ಹಾಲಿವುಡ್ ನಟಿ ಕಿರ್ಸ್ಟಿ ಅಲ್ಲೆ(Kirstie Alley) ತಮ್ಮ 71 ನೇ ವಯಸ್ಸಿಗೇ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಕಿರ್ಸ್ಟಿ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ನಿಧನರಾಗಿದ್ದಾರೆ ಎಂದು ಅವರ ಮಕ್ಕಳಾದ ಟ್ರೂ ಮತ್ತು ಲಿಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ.
“ನಮ್ಮ ಪ್ರೀತಿಯ ತಾಯಿಯು ಕ್ಯಾನ್ಸರ್ ಯುದ್ಧದೊಂದಿಗೆ ಹೋರಾಡಿ ನಿಧನರಾದರು ಎಂದು ನಿಮಗೆ ತಿಳಿಸಲು ನಾವು ದುಃಖಿತರಾಗಿದ್ದೇವೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ರೂ ಮತ್ತು ಲಿಲ್ಲಿಯು ಅಲ್ಲೆಯ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು, ʻನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ನಾವು ಧನ್ಯವಾದಗಳು ಮತ್ತು ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ನೀವು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇವೆʼ ಎಂದು ಅಲ್ಲೆ ಅವರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಿರ್ಸ್ಟಿ ಹಾಲಿವುಡ್ನ ಚಿಯರ್ಸ್ ಸಿನಿಮಾದ ಮೂಲಕ ಜನಪ್ರಿಯತೆ ಪಡೆದಿದ್ದರು. ಸಿನಿಮಾ ಅಷ್ಟೇ ಅಲ್ಲದೇ, ವೆಬ್ಸಿರೀಸ್ಗಳಲ್ಲೂ ನಟಿಸಿದ್ದರು.
BIG NEWS : ʻದಾನದ ಉದ್ದೇಶ ಧರ್ಮ ಪರಿವರ್ತನೆಯಾಗಬಾರದುʼ: ಸುಪ್ರೀಂ ಕೋರ್ಟ್
BIG NEWS : ʻದಾನದ ಉದ್ದೇಶ ಧರ್ಮ ಪರಿವರ್ತನೆಯಾಗಬಾರದುʼ: ಸುಪ್ರೀಂ ಕೋರ್ಟ್