ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ವಿಚಾರ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಲಕ್ಷಾಂತರ ಕಾಂಗ್ರೆಸಿಗರ ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ – ಡಿ.ಕೆ ಶಿವಕುಮಾರ್
ಬಿಜೆಪಿ ಕಾರ್ಯಕರ್ತರ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಇದೀಗ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆ ನಡೆಸಲು ಇಂಟರ್ನೆಟ್ ಮೂಲಕ ಕರೆ ಮತ್ತು ಬೈಕ್ನಲ್ಲಿ ಫಾಲೋ ಮಾಡುತ್ತಿದ್ದರೆಂದು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
28 ವರ್ಷ-ವಯಸ್ಸಿನ ವ್ಯಕ್ತಿಯೊಬ್ಬನಿಗೆ ಇಂಟರ್ನೆಟ್ ಮೂಲಕ ಕರೆ ಬಂದಿರುವುದು ನಿಜ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ, ಅದರೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಎಂದು ಅವರು ಹೇಳಿದ್ದನ್ನು ಪರಿಶೀಲಿಸಿದಾಗ ಅದು ಫುಡ್ ಡೆಲಿವರಿ ಬಾಯ್ (Food Delivery Boy) ಆಗಿದ್ದು ಅವನು ದೂರುದಾರ ಮನೆ ಪಕ್ಕ ಆಹಾರದ ಪೊಟ್ಟಣ ಡೆಲಿವರಿ ಮಾಡಲು ಹೋಗಿದ್ದಾನೆ, ಅಷ್ಟೇ, ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಲಕ್ಷಾಂತರ ಕಾಂಗ್ರೆಸಿಗರ ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ – ಡಿ.ಕೆ ಶಿವಕುಮಾರ್
ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿರುವ ಎಲ್ಲ ಮೇಸೇಜುಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅವುಗಳ ನಿಖರತೆಯನ್ನು ಪತ್ತೆಮಾಡಲಾಗುತ್ತಿದೆ. ಕೆಲವರು ಸುಳ್ಳುಸುದ್ದಿಗಳನ್ನು ಹರಿಬಿಡುತ್ತಿದ್ದಾರೆ, ಸಾರ್ವಜನಿಕರು ಯಾವುದಕ್ಕೂ ಪ್ರತಿಕ್ರಿಯಿಸಬಾರದೆಂದು ಮಂಗಳೂರು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್