ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೀರನ್ ಪೊಲಾರ್ಡ್ ಮಂಗಳವಾರ ತಮ್ಮ ಐಪಿಎಲ್ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ್ದು, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
💙 #OneFamily @mipaltan pic.twitter.com/4mDVKT3eu6
— Kieron Pollard (@KieronPollard55) November 15, 2022
ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, “ನಾನು ಇನ್ನು ಮುಂದೆ ಎಂಐ ಪರ ಆಡದಿದ್ದರೆ ನಾನು ಎಂಐ ವಿರುದ್ಧ ಆಡುವುದನ್ನ ನೋಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಕೀರಾನ್ ಮುಂಬೈ ಇಂಡಿಯನ್ಸ್ನೊಂದಿಗೆ ಕಳೆದ ಹಲವು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಗೆದ್ದ ನಂತರ ಪೊಲಾರ್ಡ್ ಅಂತಿಮವಾಗಿ ಈ ವರ್ಷದ ಐಪಿಎಲ್ಗೆ ಮೊದಲು ನಿವೃತ್ತಿ ಘೋಷಿಸಿದ್ದಾರೆ.
ಮುಂಬರುವ ಐಪಿಎಲ್ 2023 ಮಿನಿ ಹರಾಜಿನ ಮೊದಲು ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದೆ ಮತ್ತು ಪೊಲಾರ್ಡ್ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಐಪಿಎಲ್’ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬೈ ಪರ 12 ವರ್ಷಗಳ ಕಾಲ ಆಡಿದ ನಂತರ, ಪೊಲಾರ್ಡ್ ಅವರು ಮುಂಬೈಯೊಂದಿಗೆ IPL ಗೆ ವಿದಾಯ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಆಲ್ರೌಂಡರ್ ಈ ವರ್ಷದ ಏಪ್ರಿಲ್ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು.